ಕರ್ನಾಟಕ

karnataka

ETV Bharat / sitara

ಕ್ಯಾಮೆರಾ ಹಿಡಿದ ಗೋಲ್ಡನ್​​ ಸ್ಟಾರ್​...ಗಡ್ಡ ಬಿಟ್ಟು ಹಾಡಿದ್ರು ಪ್ಯಾಥೋ ಸಾಂಗ್​..! - undefined

ಹಳೇ ಇಮೇಜ್​ನಿಂದ ಹೊರಬರಲು ಗೋಲ್ಡನ್​ ಸ್ಟಾರ್​ ಪ್ರಯತ್ನ, ವಿಭಿನ್ನ ಕಥೆ ಆಯ್ಕೆ ಮಾಡಿಕೊಂಡು ಅಭಿಮಾನಿಗಳನ್ನ ಮೆಚ್ಚಿಸಲು ಬರ್ತಿದ್ದಾರೆ ಗಣೇಶ್​

ಕ್ಯಾಮರಾ ಹಿಡಿದ ಗೋಲ್ಡನ್​​ ಸ್ಟಾರ್

By

Published : Mar 31, 2019, 12:58 PM IST

ಲವರ್​ ಬಾಯ್​ ಇಮೇಜ್​ನಿಂದ ಹೊರಬರಲು ಪ್ರಯತ್ನಿಸುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಹೊಸ ರೀತಿಯ ಪಾತ್ರಗಳ ಸಿನಿಮಾಗಳನ್ನ ಮಾಡ್ತಿದ್ದಾರೆ. ಇತ್ತೀಚೆಗೆ ಸೋಲು ಗೆಲುವುಗಳೆರಡನ್ನು ಕಂಡಿರುವ ಈ ಹೀರೋ ಸಾಕಷ್ಟು ಯೋಚಿಸಿ ಕಥೆಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಈ ಬಾರಿ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಗಣಿ ತಮ್ಮ ಆಪ್ತ ನಿರ್ದೇಶಕ ಪ್ರೀತಮ್​ ಗುಬ್ಬಿಗೆ ಚಾನ್ಸ್​ ನೀಡಿದ್ದಾರೆ. ಮಳೆಯಲಿ ಜೊತೆಯಲಿ, ದಿಲ್​ ರಂಗೀಲಾ ನಂತರ ಮತ್ತೆ ಒಂದಾಗಿರುವ ಈ ಜೋಡಿ ಹೊಸ ಮೋಡಿ ಮಾಡಲು ಮುಂದಾಗಿದ್ದಾರೆ.

ಈ ಬಾರಿ ತಮಿಳಿನ 99 ಸಿನಿಮಾ ರಿಮೇಕ್​ಗೆ ಕೈ ಹಾಕಿರುವ ಗಣೇಶ್​ ಅದಕ್ಕಾಗಿ ಸಾಕಷ್ಟು ತಯಾರಿ ಸಹ ನಡೆಸಿದ್ದಾರೆ. ಈ ಸಿನಿಮಾದಲ್ಲಿ ಫೋಟೋಗ್ರಾಫರ್​ ಆಗಿಯೂ ಕಾಣಿಸಿಕೊಳ್ಳಲಿರುವ ಗಣಿ ಗಡ್ಡ ಬಿಟ್ಟು ದೇವದಾಸ ತರ ಕ್ಯಾಮೆರ ಹಿಡಿದು ಮನಾಲಿಯ ಬ್ಯೂಟಿಫುಲ್ ಲೋಕೆಶನ್ ಗಳಲ್ಲಿ ಸಂಚಾರ ಮಾಡ್ತಾ ಇದ್ದಾರೆ..

ಈಗಾಗಲೇ ಹಾಡುಗಳಿಂದ ಸೌಂಡ್ ಮಾಡ್ತಿರೋ 99 ಸಿನಿಮಾ ಈಗ ಮತ್ತೊಂದು ಸ್ಯಾಡ್ ಸಾಂಗ್ ರಿಲೀಸ್ ಮಾಡಿದೆ.. ಈ ಪ್ಯಾಥೊ ಹಾಡಿನಲ್ಲಿ ಗಣೇಶ್ ಮತ್ತೆ ಮುಂಗಾರು ಮಳೆಯ ಪ್ರೀತಂರನ್ನ ನೆನಪಿಸುತ್ತಿದ್ದಾರೆ..


ಅಂದು ಮುಂಗಾರು ಮಳೆ 2 ನಲ್ಲಿ ಸರಿಯಾಗಿ ನೆನಪಿದೆ ನನಗೆ ಹಾಡಿನಿಂದ ಮೋಡಿ ಮಾಡಿದ್ದ, ಗಾಯಕ ಅರ್ಮಾನ್ ಮಲ್ಲಿಕ್ ಈಗ99 ಚಿತ್ರದ ಗಮ್ಯವೇ ಎಂಬ ಹಾಡನ್ನ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತೊಮ್ಮೆ ಸಕ್ಸಸ್​ ಆಗಿದ್ದು, ಸದ್ಯಕ್ಕೆ ಈ ಹಾಡು ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

For All Latest Updates

TAGGED:

ABOUT THE AUTHOR

...view details