ETV Bharat Karnataka

ಕರ್ನಾಟಕ

karnataka

ETV Bharat / sitara

ನಿರ್ದೇಶಕರ ಒತ್ತಾಯಕ್ಕೆ ಮಣಿದು ವೇಶ್ಯೆಯ ಪಾತ್ರಕ್ಕೆ ಒಪ್ಪಿದೆ ; ಕಿರುಚಿತ್ರದಲ್ಲಿ ಗ್ಲಾಮರಾದ ಗಾನವಿ - Ganavi lakshman latest news

ಸೈಕಾಲಜಿ ಉಪನ್ಯಾಸಕ ಹಾಗೂ ಲೈಂಗಿಕ ವರ್ಕರ್ ನಡುವೆ ನಡೆಯವ ಕಥೆ ಇದಾಗಿದೆ. ಅದರಲ್ಲಿ ಲೈಂಗಿಕ ವರ್ಕರ್ ಆಗಿ ಗಾನವಿ ನಟಿಸಿದ್ದಾರೆ. ಈಗಾಗಲೇ ಈ ಕಿರುಚಿತ್ರ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರು ಮೆಚ್ಚಿಕೊಂಡಿದ್ದಾರೆ..

Kannada new film
Kannada new film
author img

By

Published : Apr 6, 2021, 6:20 PM IST

ರಿಷಬ್ ಶೆಟ್ಟಿ ನಿರ್ದೇಶನದ ಹೀರೊ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಬೆಳ್ಳಿ ತೆರೆಯಲ್ಲೂ ಕಮಾಲ್ ಮಾಡುತ್ತಿದ್ದಾರೆ ಗಾನವಿ.

in article image
Kannada new film

ಇದರ ಜೊತೆಗೆ ಕಿರುಚಿತ್ರದಲ್ಲಿಯೂ ಗಾನವಿ ಲಕ್ಷ್ಮಣ್ ಅಭಿನಯಿಸಿದ್ದು ಭಿನ್ನ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.

Kannada new film

ಗುಟ್ರುಗೂ ಅನ್ನೋ ಕಿರುಚಿತ್ರದಲ್ಲಿ ಗಾನವಿ ಅಭಿನಯಿಸಿದ್ದು, ಅದರಲ್ಲಿ ಗಾನವಿ ವೇಶ್ಯೆ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಸೈಕಾಲಜಿ ಉಪನ್ಯಾಸಕ ಹಾಗೂ ಲೈಂಗಿಕ ವರ್ಕರ್ ನಡುವೆ ನಡೆಯವ ಕಥೆ ಇದಾಗಿದೆ. ಅದರಲ್ಲಿ ಲೈಂಗಿಕ ವರ್ಕರ್ ಆಗಿ ಗಾನವಿ ನಟಿಸಿದ್ದಾರೆ.

Kannada new film

ಈಗಾಗಲೇ ಈ ಕಿರುಚಿತ್ರ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

Kannada new film

"ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಕಿರುಚಿತ್ರದಲ್ಲಿ ಅಭಿನಯಿಸುವ ಅವಕಾಶ ದೊರಕಿತ್ತು. ಆದರೆ, ವೇಶ್ಯೆಯ ಪಾತ್ರವಾದ ಕಾರಣ ಒಪ್ಪಲಿಲ್ಲ. ನಿರ್ದೇಶಕರ ಒತ್ತಾಯಕ್ಕೆ ಮಣಿದು ನಟಿಸಲು ಒಪ್ಪಿಕೊಂಡೆ. ಇದೀಗ ಕಿರುಚಿತ್ರಕ್ಕೆ ದೊರೆತ ಪ್ರತಿಕ್ರಿಯೆ ಕಂಡು ಖುಷಿಯಾಗುತ್ತಿದೆ" ಎಂದು ಹೇಳುತ್ತಾರೆ ಗಾನವಿ.

Kannada new film

ABOUT THE AUTHOR

...view details