ಜನತಾ ಕರ್ಫ್ಯೂ ಘೋಷಣೆಯಾದಾಗಿನಿಂದ ನಟ ದರ್ಶನ್ ಮೈಸೂರಿನ ತಮ್ಮ ಫಾರ್ಮ್ ಹೌಸ್‌ನಲ್ಲಿ ಲಾಕ್ ಆಗಿದ್ದಾರೆ. ಅಲ್ಲಿ ತೋಟದ ಕೆಲಸಗಳನ್ನು ಮಾಡಿಕೊಂದು, ತಮ್ಮ ಪ್ರಾಣಿ-ಪಕ್ಷಿಗಳ ಜೊತೆಗೆ ಒಳ್ಳೆಯ ಸಮಯವನ್ನು ಕಳೆಯುತ್ತಿದ್ದಾರೆ. ಈ ಮಧ್ಯೆ ಅವರು ಇತ್ತೀಚೆಗೆ ಮೈಸೂರಿನ ಊಟಿ ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ನಟ ರಾಜವರ್ಧನ್ ಜೊತೆಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ, ಶ್ರೀಗಳಿಂದ ಒಂದು ಗಿಣಿಯನ್ನು ಉಡುಗೊರೆಯಾಗಿ ಪಡೆದಿದ್ದಾರೆ.
ದರ್ಶನ್‌ಗೆ ಸಚ್ಚಿದಾನಂದ ಸ್ವಾಮಿಗಳಿಂದ ಗಿಫ್ಟ್ ಹೌದು, ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ದರ್ಶನ್, ಶ್ರೀಗಳೊಂದಿಗೆ ಉಭಯ ಕುಶಲೋಪರಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್‌ಗೆ ತಮ್ಮ ಆಶ್ರಮವನ್ನು ತೋರಿಸಿದ ಶ್ರೀಗಳು, ರೆಡ್ ಹೆಡೆಡ್ ಅಮೆಜಾನ್ ಜಾತಿಗೆ ಸೇರಿದ ಒಂದು ಗಿಣಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಗಿಣಿಯನ್ನು ದರ್ಶನ್ ಬಹಳ ಭಕ್ತಿಯಿಂದ ಸ್ವೀಕರಿಸಿದ್ದು, ಅದನ್ನು ತಮ್ಮ ಫಾರ್ಮ್ ಹೌಸ್‌ನಲ್ಲಿ ಸಾಕಲಿದ್ದಾರೆ. ದರ್ಶನ್ರ ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಹಲವು ಪ್ರಾಣಿ-ಪಕ್ಷಿಗಳನ್ನು ಸಾಕಿದ್ದು, ಆ ಸಾಲಿಗೆ ಈಗ ಈ ರೆಡ್ ಹೆಡೆಡ್ ಅಮೆಜಾನ್ ಜಾತಿಗೆ ಸೇರಿದ ಗಿಣಿ ಸಹ ಹೊಸದಾಗಿ ಸೇರ್ಪಡೆಯಾಗಿದೆ.
ಸಚ್ಚಿದಾನಂದ ಸ್ವಾಮಿಗಳೊಂದಿಗೆ ದರ್ಶನ್ ಮೈಸೂರಿನ ತಮ್ಮ ತೋಟದ ಮನೆಯಲ್ಲಿರುವ ಬಗ್ಗೆ ಕೆಲವು ದಿನಗಳ ಹಿಂದೆ ಮಾತನಾಡಿದ್ದ ಅವರು,`ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆಯೇ ಮೈಸೂರಿನ ತೋಟದ ಮನೆಗೆ ಬಂದಿದ್ದೇನೆ. ಇಲ್ಲೊಂದಿಷ್ಟು ಕೃಷಿ ಕೆಲಸಗಳಿದ್ದು, ಅದರಲ್ಲಿ ತೊಡಗಿಸಿಕೊಂಡಿದ್ದೇನೆ. ತೋಟದಲ್ಲಿದ್ದು, ಕೊಟ್ಟಿಗೆಯಲ್ಲಿ ಹಸುಗಳ ಕೆಲಸ ಮಾಡುತ್ತಿದ್ದರೆ ಇಮ್ಯುನಿಟಿ ಪವರ್ ಸಹ ಹೆಚ್ಚುತ್ತದೆ' ಎಂದು ಹೇಳಿಕೊಂಡಿದ್ದರು.
ಓದಿ:ಬಿಹಾರದ ಬಳಿಕ ಉತ್ತರ ಪ್ರದೇಶದಲ್ಲೂ ನದಿಯಲ್ಲಿ ತೇಲಿ ಬರುತ್ತಿವೆ ಮೃತದೇಹಗಳು!