ಇದೇ ಶುಕ್ರವಾರ ಅಂದರೆ ಜುಲೈ 26 ರಂದು ರವಿಚಂದ್ರನ್ ಅಭಿನಯದ 'ದಶರಥ' ಹಾಗೂ 'ತಿಥಿ' ಖ್ಯಾತಿಯ ಗಡ್ಡಪ್ಪ ದ್ವಿಪಾತ್ರದಲ್ಲಿ ನಟಿಸಿರುವ 'ಜರ್ಕ್' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಮೂಲಕ ಕ್ರೇಜಿಸ್ಟಾರ್ಗೆ ಸೆಡ್ಡು ಹೊಡೆಯಲು ಬರುತ್ತಿದ್ದಾರೆ ಗಡ್ಡಪ್ಪ.
ಕ್ರೇಜಿಸ್ಟಾರ್ಗೆ ಸೆಡ್ಡು ಹೊಡೆಯಲು ಬರುತ್ತಿದ್ದಾರೆ ಗಡ್ಡಪ್ಪ..ಈ ವಾರ ಬಿಡುಗಡೆಯಾಗ್ತಿದೆ 'ಜರ್ಕ್' - undefined
ಮೆಟ್ರೋದಲ್ಲಿ ಕೆಲಸ ಮಾಡುವ ಕೆಲವರು ಸೇರಿಕೊಂಡು ತಯಾರಿಸಿರುವ 'ಜರ್ಕ್' ಸಿನಿಮಾ ಇದೇ ತಿಂಗಳ 26 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಅದೇ ದಿನ ರವಿಚಂದ್ರನ್ ಅಭಿನಯದ 'ದಶರಥ' ಸಿನಿಮಾ ಕೂಡಾ ಬಿಡುಗಡೆಯಾಗುತ್ತಿದೆ.
ಮೆಟ್ರೋದಲ್ಲಿ ಕೆಲಸ ಮಾಡುವ ಕೆಲವು ಸ್ನೇಹಿತರು ಜೊತೆ ಸೇರಿಕೊಂಡು ತಯಾರಿಸಿರುವ ಚಿತ್ರ ಜರ್ಕ್. ಮೆಟ್ರೋ ಟೆಕ್ನಿಕಲ್ನಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕ ಮಹಾಂತೇಶ್ ಮದಕರಿ ಹಾಗೂ ಈ ಚಿತ್ರದ ನಾಯಕ ಕೃಷ್ಣರಾಜ್ ಸೇರಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಮಾಧ್ಯಮ ಗೋಷ್ಠಿ ಕರೆದ ಚಿತ್ರತಂಡ ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡಿದೆ. ಗಡ್ಡಪ್ಪ ಕಾರಣಾಂತರಗಳಿಂದ ಈ ಕಾರ್ಯಕ್ರಮಕ್ಕೆ ಹಾಜರಿರಲಿಲ್ಲ. ಚಿತ್ರದ ನಟಿಯರಾದ ನಿತ್ಯಾ, ಆಶಾ ಭಂಡಾರಿ, ನೆ.ಲ. ನರೇಂದ್ರ ಬಾಬು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ನೆ.ಲ. ನರೇಂದ್ರ ಬಾಬು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಡ್ವರ್ಡ್ ಷಾ ಸಂಗೀತ, ಚಂದ್ರು ಸೊಂಡೆಕೊಪ್ಪ ಛಾಯಾಗ್ರಹಣವಿದೆ. ಮಯೂರ ಪ್ರೊಡಕ್ಷನ್ಸ್ ಅಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕು.