ಕರ್ನಾಟಕ

karnataka

ETV Bharat / sitara

ಮಲ್ಟಿ ಲೇಯರ್ ‘ನನ್ನ ಪ್ರಕಾರ’ ಬಿಡುಗಡೆಗೆ ಸಿದ್ಧ - undefined

‘ನನ್ನ ಪ್ರಕಾರ’ ಇದೊಂದು ಮಲ್ಟಿ ಲೇಯರ್ ಅಷ್ಟೇ ಅಲ್ಲ ಮಲ್ಟಿ ಸ್ಟಾರ್ ಸಿನಿಮಾ ಕೂಡ. ಈ ಚಿತ್ರದ ಪ್ರಮುಖ ಆಕರ್ಷಣೆ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಿಯಾಮಣಿ ಹಾಗೂ ನಟ ಕಿಶೋರ್​​ ಅಭಿನಯ.

ನನ್ನ ಪ್ರಕಾರ ಚಿತ್ರದಲ್ಲಿ ನಟಿ ಪ್ರಿಯಾಮಣಿ

By

Published : Apr 13, 2019, 2:12 PM IST

ಮುದ್ದಾದ ಮಯೂರಿಯೂ ನಟಿಸಿರುವ ‘ನನ್ನ ಪ್ರಕಾರ’ ಸಿನಿಮಾ ಸದ್ಯದಲ್ಲೇ ಹಾಡುಗಳ ಬಿಡುಗಡೆ ಮಾಡಿ, ಮೇ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಕ್ರೈಂ ಥ್ರಿಲ್ಲರ್ ಕಥಾ ವಸ್ತುವಿನ ಈ ಚಿತ್ರದಲ್ಲಿ ಪ್ರಭಾವಿ ನಟ ಕಿಶೋರ್ ಟಫ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಜಿ.ವಿ.ಕೆ ಕಂಬೈನ್ಸ್ ಅಡಿ ಗುರುರಾಜ್ ಎಸ್.ನಿರ್ಮಾಣದ ‘ನನ್ನ ಪ್ರಕಾರ’ ಹಾಡುಗಳನ್ನು ಮಾರುಕಟ್ಟೆಗೆ ಜೀ ಮ್ಯೂಜಿಕ್ ತರುತ್ತಿದೆ.

ನನ್ನ ಪ್ರಕಾರ ಚಿತ್ರ

ಈ ಚಿತ್ರಕ್ಕೆ ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹುಲಿರಾಯ ಕನ್ನಡ ಸಿನಿಮಾ ಬಳಿಕ ಸಂಗೀತ ನಿರ್ದೇಶಕ ಅರ್ಜುನ್ ರಾಮ್ ಈ ಚಿತ್ರಕ್ಕೆ ರಾಗ ಸಂಯೋಜನೆ ಮಾಡಿದ್ದಾರೆ.ಮನ್ವರ್ಶಿ ಹಾಗೂ ವಿನಯ್ ಬಾಲಾಜಿ ಸಂಭಾಷಣೆ, ಮನೋಹರ್ ಜೋಷಿ ಛಾಯಾಗ್ರಹಣ, ಸತೀಶ್ ಸಂಕಲನ, ಥ್ರಿಲ್ಲರ್ ಮಂಜು ಹಾಗೂ ಡಿಫರೆಂಟ್ ಡ್ಯಾನ್ನಿ ಸಾಹಸ, ಮದನ್ ಹರಿಣಿ, ನಾಗೇಶ್ ನೃತ್ಯ ನಿರ್ದೇಶನ ಒಳಗೊಂಡಿರುವ ಈ ಚಿತ್ರಕ್ಕೆ ಕವಿರಾಜ್, ಬಹದ್ದೂರ್ ಚೇತನ್ ಹಾಗೂ ಕಿರಣ್ ಕಾವೇರಿಯಪ್ಪ ಹಾಡುಗಳನ್ನು ಒದಗಿಸಿದ್ದಾರೆ.

ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ, ಗಿರಿಜ ಲೋಕೇಶ್, ವೈಷ್ಣವಿ ಹಾಗೂ ಇತರರು ತಾರಗಣದಲ್ಲಿದ್ದಾರೆ.

For All Latest Updates

TAGGED:

ABOUT THE AUTHOR

...view details