ನಗೆ ನಟ ಕೋಮಲ್ ನಾಯಕನಾಗಿರುವ ‘ಕೆಂಪೇ ಗೌಡ 2’ ಚಿತ್ರ ಶುರುವಾಗಿ ನಾಲ್ಕು ವರ್ಷವಾಯಿತು. ಇದುವರೆಗೆ ಚಿತ್ರತಂಡದಿಂದ ಒಂದು ಟ್ರೇಲರ್ ಬಿಟ್ರೆ ಮತ್ತೇನೂ ಹೊರಗೆ ಬಂದಿಲ್ಲ.
ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯ ನಟರುಗಳು ಒಂದೇ ಸಿನಿಮಾಕ್ಕೆ ಹಲವು ವರ್ಷ ವಿನಿಯೋಗಿಸಿರುವುದುಂಟು.ಅದರ ಸಾಲಿಗೆ ಇದೀಗ ಕೋಮಲ್ ಸಹ ಸೇರಿಕೊಂಡಿದ್ದಾರೆ. ಇವರು ನಟಿಸುತ್ತಿರುವ ‘ಕೆಂಪೇಗೌಡ 2’ ಪ್ರಾರಂಭ ಮಾಡಿ ನಾಲ್ಕು ವರ್ಷಗಳೇ ಕಳೆದಿವೆ. ‘ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ’ ಸಿನಿಮಾ ಬಳಿಕ ಕನ್ನಡ ರಜತ ಪರದೆಯ ಮೇಲೆ ಕೋಮಲ್ ನಾಪತ್ತೆಯಾಗಿದ್ದರು. ಈಗ ಸ್ಲಿಮ್ ಆ್ಯಂಡ್ ಟ್ರಿಮ್ ಆಗಿ ಶಂಕರೆ ಗೌಡ ನಿರ್ಮಾಣದ ‘ಕೆಂಪೇ ಗೌಡ 2’ ಮೂಲಕ ಬೆಳ್ಳಿ ಪರದೆ ಮುಂದೆ ಬರುತ್ತಿದ್ದಾರೆ.
ತಮಿಳಿನ ಸಿಂಗಂ ಸಿನಿಮಾ ಕನ್ನಡಕ್ಕೆ ‘ಕೆಂಪೇಗೌಡ’ ಹೆಸರಿನಲ್ಲಿ ರಿಮೇಕ್ ಮಾಡಿ ಸಕ್ಸಸ್ ಆಗಿದ್ದರು ಕಿಚ್ಚ ಸುದೀಪ್. ಈಗ 'ಕೆಂಪೇಗೌಡ 2' ಯಾವುದೇ ಚಿತ್ರದ ನೆರಳು ಇಲ್ಲದ ಹಾಗೆ ಮಾಡಲಾಗಿದೆ. ಕೋಮಲ್ ಕುಮಾರ್ ಮೊದಲು ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡು ಶ್ರಮ ವಹಿಸಿ ಮಾಡಿರುವ ಚಿತ್ರವಿದು. ದೊಡ್ಡಗ್ಯಾಪ್ನಂತ್ರ ಚಿತ್ರತಂಡ ನಾಳೆ ‘ಕೆಂಪೇ ಗೌಡ 2’ ಮತ್ತೊಂದು ಟ್ರೇಲರ್ ರಿಲೀಸ್ ಮಾಡುತ್ತಿದೆ.
ಇನ್ನು ಈ ಚಿತ್ರದಲ್ಲಿ ಲೂಸ್ ಮಾದ ಯೋಗಿ ಸಹ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಮಹಾಬಲಿಪುರಂನಲ್ಲಿ ನಡೆದ ಕಾರು ಚೇಸಿಂಗ್ ದೃಶ್ಯದಲ್ಲಿ ಕೋಮಲ್ ಕುಮಾರ್ ಹಾಗೂ ಯೋಗೀಶ್ ಅಪಾಯದಿಂದ ಪಾರಾಗಿದ್ದರು. ನವನೀತ್ ಕೌರ್ ನಾಯಕಿ. ಕ್ರಿಕೆಟಿಗ ಶ್ರೀಶಾಂತ್ ಸಹ ಒಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶಂಕರೇಗೌಡ ನಿರ್ಮಾಣದ ಜತೆಗೆ ನಿರ್ದೇಶನವನ್ನು ಮಾಡಿದ್ದಾರೆ. ಇವರಿಗೆ ಜತೆ ಕೈಜೋಡಿಸಿರುವ ಶಂಕರ್ ರೆಡ್ಡಿ ಸಹ ಹಣ ಹಾಕಿದ್ದಾರೆ.