ಕರ್ನಾಟಕ

karnataka

ETV Bharat / sitara

17 ವರ್ಷಗಳ ನಂತರ ಹೀರೋ ಆದ ಫ್ರೆಂಡ್ಸ್​​ ಖ್ಯಾತಿಯ ಹರಿ - ನನ್ನ ಮಗಳೆ ಹೀರೋಯಿನ್ ಚಿತ್ರದ ನಿರ್ದೇಶಕ ಬಾಹುಬಲಿ

2002 ರಲ್ಲಿ ತೆರೆ ಕಂಡ ಫ್ರೆಂಡ್ಸ್ ಸಿನಿಮಾದಲ್ಲಿ ದಪ್ಪ ದೇಹದಿಂದಲೇ ನೋಡುಗರಿಗೆ ಕಚಗುಳಿ ಇಟ್ಟಿದ್ದ ನಟ ಹರಿ, ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿದ್ದಾರೆ.

ನಟ ಹರಿ

By

Published : Aug 1, 2019, 2:24 PM IST

ಎಂಆರ್​​​ಪಿ ಎನ್ನುವ ಕ್ಯಾಚಿ ಟೈಟಲ್ ಇಟ್ಟುಕೊಂಡು ಪ್ರೇಕ್ಷಕರ ಎದುರು ನಗಿಸಲು ಬರುತ್ತಿದ್ದಾರೆ ನಟ ಹರಿ. ಸಹಜವಾಗಿ ಎಂಆರ್​​​ಪಿ ಅನ್ನೋದು ವಸ್ತುಗಳ ಬೆಲೆ ಸೂಚಿಸುತ್ತದೆ. ಆದರೆ, ಇಲ್ಲಿ ಎಂಆರ್​​ಪಿ ಅಂದ್ರೆ 'ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್' ಅಂತೆ.

ಎಂಆರ್​​ಪಿ ಚಿತ್ರದ ಪೋಸ್ಟರ್​

ನಿನ್ನೆ ಮಾಧ್ಯಮಗಳ ಎದುರು ಹಾಜರಾಗಿದ್ದ ನಿರ್ದೇಶಕ ಬಾಹುಬಲಿ, ನಿರ್ಮಾಪಕರಾದ ಎಂ.ಡಿ. ಶ್ರೀಧರ್, ಕೃಷ್ಣ ಕುಮಾರ್, ಮೋಹನ್ ಕುಮಾರ್ ಹಾಗು ರಂಗಸ್ವಾಮಿ, ಸಂಗೀತ ನಿರ್ದೇಶಕ ಹೆಚ್.ಆರ್.ವಿ ಹರ್ಷವರ್ಧನ್ ರಾಜ್, ನಾಯಕನ ಪಾತ್ರದಾರಿ ಹರಿ, ವಿಜಯ್ ಚೆಂಡೂರ್ ಹಾಗು ಬಾಲ್ ರಾಜ್ವಾಡಿ ಈ ಚಿತ್ರದ ಕುರಿತು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡ್ರು.

ಮಾಧ್ಯಮಗೋಷ್ಟಿಯಲ್ಲಿ ಎಂಆರ್​​ಪಿ ಚಿತ್ರತಂಡ

ಈ ಚಿತ್ರದಲ್ಲಿ ನಟ ಹರಿ ದಡೂತಿ ಕಾಯದ ಸ್ಟಾಫ್ಟ್​ವೇರ್ ಉದ್ಯೋಗಿ. ವಿಜಯ್ ಚೆಂಡೂರ್ ಇದೇ ಮೊದಲ ಬಾರಿಗೆ ಏಳು ಅವತಾರಗಳಲ್ಲಿ ಈ ಚಿತ್ರದ ಕಾಣಿಸಿಕೊಳ್ಳಲಿದ್ದಾರೆ. ’ನನ್ನ ಮಗಳೆ ಹೀರೋಯಿನ್’ ಚಿತ್ರವನ್ನ ಮಾಡಿದ ನಿರ್ದೇಶಕ ಬಾಹುಬಲಿ ಈ ಬಾರಿ ಔಟ್ ಅಂಡ್ ಔಟ್ ಕಾಮಿಡಿ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳ್ತಿದ್ದಾರೆ. ನಿರ್ದೇಶಕ ಎಂ.ಡಿ. ಶ್ರೀಧರ್, ಕ್ಯಾಮರಾಮ್ಯಾನ್ ಆಗಿರೋ ಕೃಷ್ಣಕುಮಾರ್ ಹಾಗೂ ಮೋಹನ್ ಮತ್ತು ರಂಗಸ್ವಾಮಿ ಸೇರಿ ಈ ಸಿನಿಮಾ ಮಾಡಿದ್ದಾರೆ. ಎಲ್.ಎಂ‌. ಸೂರಿ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದಾರೆ.

ಎಂಆರ್​​ಪಿ ಚಿತ್ರದ ಪೋಸ್ಟರ್​

ಇನ್ನು ಹರಿ ಫಸ್ಟ್‌ ಟೈಮ್ ಆ್ಯಕ್ಷನ್ ಜೊತೆಗೆ ಯುವ ನಟಿ ಚೈತ್ರಾರೆಡ್ಡಿ ಜೊತೆ ರೊಮ್ಯಾನ್ಸ್ ಕೂಡ ಮಾಡಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರೋ ಎಂಆರ್​​ಪಿ ಚಿತ್ರ ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಿ, ಆಗಸ್ಟ್​​ನಲ್ಲಿ ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿದೆ.

ABOUT THE AUTHOR

...view details