ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬ್ಯಾನರ್ನಲ್ಲಿ ಈ ವರ್ಷ ತಯಾರಾದ ಸಿನಿಮಾ 'ಫ್ರೆಂಚ್ ಬಿರಿಯಾನಿ' ಹಾಸ್ಯಪ್ರಿಯರ ಮೆಚ್ಚುಗೆ ಪಡೆಯಿತು. ಕೊರೊನಾ ನಡುವೆಯೂ ವಿಭಿನ್ನ ಶೀರ್ಷಿಕೆಯಿಂದಲೇ ಗಮನ ಸೆಳೆದ 'ಫ್ರೆಂಚ್ ಬಿರಿಯಾನಿ' ಲಾಕ್ ಡೌನ್ ಇದ್ದ ಕಾರಣ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಿತ್ತು.
'ಫ್ರೆಂಚ್ ಬಿರಿಯಾನಿ' ಟ್ರೇಲರ್ ಸ್ಪೂಫ್ ಮಾಡಿದ ಪುನೀತ್ ಅಭಿಮಾನಿಗಳು - Puneet fans French Biriyani spoof
ಪುನೀತ್ ರಾಜ್‍ಕುಮಾರ್ ಪಿಆರ್ಕೆ ಬ್ಯಾನರ್ ಅಡಿಯಲ್ಲಿ ತಯಾರಾದ 'ಫ್ರೆಂಚ್ ಬಿರಿಯಾನಿ' ಚಿತ್ರದ ಟ್ರೇಲರನ್ನು ಪುನೀತ್ ಅಭಿಮಾನಿಗಳು ಸ್ಪೂಫ್ ಮಾಡಿದ್ದಾರೆ. ಅಭಿಮಾನಿಗಳ ಪ್ರಯತ್ನಕ್ಕೆ ಪುನೀತ್ ಮೆಚ್ಚುಗೆ ವ್ಯಕ್ತಪಡಿಸಿ ಆ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಕನ್ನಡ-ಹಿಂದಿ ಮಿಕ್ಸ್ ಮಾತನಾಡುವ ಮುಸ್ಲಿಂ ಯುವಕನ ಪಾತ್ರದಲ್ಲಿ ದಾನಿಶ್ ಸೇಠ್ ನಟಿಸಿದ್ದರೆ, ಪೊಲೀಸ್ ಇನ್ಸ್ಪೆಕ್ಟರ್ ಆಗಿ ರಂಗಾಯಣ ರಘು, ವಿದೇಶಿ ಪ್ರವಾಸಿಗನ ಪಾತ್ರದಲ್ಲಿ ಸಾಲ್ ಯೂಸುಫ್ ನಟಿಸಿದ್ದರು. ಇವರೊಂದಿಗೆ ರಂಗಭೂಮಿ ಕಲಾವಿದ ನಾಗಭೂಷಣ್, ದಿಶಾ ಮದನ್, ಡಾನ್ ಪಾತ್ರದಲ್ಲಿ ಸಂಪತ್ ಕುಮಾರ್ ಪ್ರೇಕ್ಷಕರಿಗೆ ಕಿಕ್ ನೀಡಿದ್ದರು. ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳ ಟ್ರೇಲರನ್ನು ಕೊಳ್ಳೇಗಾಲದ ಪುನೀತ್ ಅಭಿಮಾನಿಗಳು ಸ್ಪೂಫ್ ಮಾಡಿ ಬಿಡುಗಡೆ ಮಾಡಿದ್ದಾರೆ.
ಈ ಯುವಕರ ತಂಡ ಇದಕ್ಕೂ ಮುನ್ನ ಕೆಲವೊಂದು ಕಿರುಚಿತ್ರಗಳನ್ನು ತಯಾರಿಸಿದೆ. ಈ ವಿಡಿಯೋ ನೋಡಿ ಸ್ವತಃ ಪುನೀತ್ ರಾಜ್‍ಕುಮಾರ್ ಬೆರಗಾಗಿದ್ದಾರೆ. ಮೊನ್ನೆಯಷ್ಟೇ ಮೊಣಕೈಲಿ ತಮ್ಮ ಚಿತ್ರ ಬಿಡಿಸಿದ ಅಭಿಮಾನಿಯ ವಿಡಿಯೋ ಹಂಚಿಕೊಂಡಿದ್ದ ಅಪ್ಪು, ಈಗ ಅಭಿಮಾನಿಗಳು ಮಾಡಿರುವ ಈ ಸ್ಪೂಫ್ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.