ಕರ್ನಾಟಕ

karnataka

ETV Bharat / sitara

ಅಭಿಮಾನಿಗೆ ಹೀಗನ್ನೋದಾ ಪುನೀತ್​ ರಾಜ್​ಕುಮಾರ್​... ಅಷ್ಟಕ್ಕೂ ಪವರ್​ಸ್ಟಾರ್​​​ ಬಾಯಲ್ಲಿ ಈ ಮಾತು ಬಂದಿದ್ದೇಕೆ? - ಫ್ರೆಂಚ್​ ಬಿರಿಯಾನಿ ಕನ್ನಡ ಚಲನಚಿತ್ರ

ಪವರ್​​ಸ್ಟಾರ್​​ ಪುನೀತ್​​ ರಾಜ್​ಕುಮಾರ ತಮ್ಮ ಅಭಿಮಾನಿಯೊಬ್ಬರಿಗೆ ಹೇ ಬೇವರ್ಸಿ ಕುಡುಕ ಅಂತ ಬೈದಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೆ ಅದೇನಪ್ಪಾ ಅಂತ ನೋಡಿದವರ ನಗುವಿಗೆ ಕಾರಣ ಕೂಡಾ ಆಗಿದೆ..

french-biriyani-kannada-film
ಪುನೀತ್ ರಾಜ್‍ಕುಮಾರ್

By

Published : Jul 23, 2020, 6:27 PM IST

Updated : Jul 23, 2020, 7:21 PM IST

ಕನ್ನಡ ಚಿತ್ರರಂಗದ ದೊಡ್ಮನೆ ರಾಜಕುಮಾರ ಅಂತಾ ಕರೆಯಿಸಿಕೊಂಡಿರುವ ನಟ ಪುನೀತ್ ರಾಜ್‍ಕುಮಾರ್ ಅವರ ನಗು ಹಾಗು ಸರಳ ವ್ಯಕ್ತಿತ್ವವನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೂ ಸಹ ಇಷ್ಟ ಪಡ್ತಾರೆ. ಆದರೆ ಈಗ ಪುನೀತ್ ರಾಜ್‍ಕುಮಾರ್ ಅಭಿಮಾನಿಯೊಬ್ಬನಿಗೆ ಬೈದಿರೋ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಡ್ಯಾನಿಶ್​ ಸೇಠ್​ ಮಿಮಿಕ್ರಿಗೆ ಅಪ್ಪು ರಿಯಾಕ್ಷನ್​

ಅಷ್ಟಕ್ಕೂ ಪವರ್ ಸ್ಟಾರ್ ಯಾವ ಅಭಿಮಾನಿಗೆ ಬೈದ್ರು ಅಂತಾ ಕನ್​ಫ್ಯೂಸ್​ ಆದ್ರಾ?.. ಜಾಸ್ತಿ ತಲೆಕಡೆಸಿಕೊಳ್ಳಬೇಡಿ ಪುನೀತ್ ರಾಜ್ ಕುಮಾರ್ ಹೀಗೆ ಬೈಯುತ್ತಿರೋದು ನಿಜವಾಗಿ ಅಲ್ಲಾ. ತಮ್ಮ ಒಡೆತನದ ಪಿ.ಆರ್.ಕೆ ಸಂಸ್ಥೆಯಡಿ ನಿರ್ಮಾಣ ಆಗಿರುವ, ಫ್ರೆಂಚ್ ಬಿರಿಯಾನಿ ಸಿನಿಮಾಕ್ಕಾಗಿ.

ಹೌದು, ಪುನೀತ್ ರಾಜ್‍ಕುಮಾರ್ ಬ್ಯಾನರ್ 'ಫ್ರೆಂಚ್ ಬಿರಿಯಾನಿ' ಸಿನಿಮಾ ನಾಳೆ ಅಮೆಜಾನ್‌ ಪ್ರೈಮ್​ನಲ್ಲಿ ಬಿಡುಗಡೆ ಆಗುತ್ತಿದೆ. ಡ್ಯಾನಿಶ್ ಸೇಠ್ ಮುಖ್ಯ ಭೂಮಿಕೆಯಲ್ಲಿರೋ 'ಫ್ರೆಂಚ್ ಬಿರಿಯಾನಿ', ಸಿನಿಮಾ ನಾಳೆ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ತೆರೆ ಕಾಣುತ್ತಿದೆ. ಮೊದಲೇ ಹಲವಾರು ವಿಷ್ಯಗಳ ಬಗ್ಗೆ ಮಿಮಿಕ್ರಿ ಮಾಡುವ ಡ್ಯಾನಿಶ್ ಸೇಠ್, ತಮ್ಮ ಚಿತ್ರದ ಪ್ರಚಾರವನ್ನ, ಪುನೀತ್ ಜೊತೆ ಮಾಡಿದ್ದಾರೆ.

ಹೇ ಪವರ್ ಸ್ಟಾರ್ ನಾನು ನಿಮ್ಮ ಅಭಿಮಾನಿ ಪ್ಲೀಸ್‌.. ನನಗೆ ಫ್ರೆಂಚ್ ಕಿಸ್ ಕೊಡಿ ಅಂತ ಡ್ಯಾನಿಶ್​ ಸೇಠ್​ ಮಿಮಿಕ್ರಿಗೆ, ಆ ಕಡೆಯಿಂದ ಅಪ್ಪು, 'ಹೇ ಬೇವರ್ಸಿ ಕುಡುಕ ಅದು ಫ್ರೆಂಚ್ ಕಿಸ್ ಅಲ್ಲಾ, ಫ್ರೆಂಚ್‌ ಬಿರಿಯಾನಿ' ಅಂತಾ ಹೇಳ್ತಾರೆ ಅಷ್ಟೇ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ‌.

ಈ ಹಿಂದೆ ಹ್ಯಾಪಿ ನ್ಯೂ ಇಯರ್ ಸಿನಿಮಾವನ್ನ ನಿರ್ದೇಶನ ಮಾಡಿದ್ದ, ಪನ್ನಾಗಭರಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಪಿ.ಆರ್.ಕೆ ಸಂಸ್ಥೆ ಅಡಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗು ಗುರುದತ್ ಎ. ತಲ್ವಾರ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಥಿಯೇಟರ್​ನಲ್ಲಿ ರಿಲೀಸ್ ಆಗದೆ, ಶುಕ್ರವಾರ ಒಟಿಟಿ ಪ್ಲಾಟ್ ಫಾರ್ಮ್​ನಲ್ಲಿ ತೆರೆ ಕಾಣುತ್ತಿರುವ ಎರಡನೇ ಸಿನಿಮಾ ಈ 'ಫ್ರೆಂಚ್ ಬಿರಿಯಾನಿ' ಆಗಿದೆ.

Last Updated : Jul 23, 2020, 7:21 PM IST

ABOUT THE AUTHOR

...view details