ಕರ್ನಾಟಕ

karnataka

ETV Bharat / sitara

ಸಾಧು ಕೋಕಿಲಾ ಹೆಸರಲ್ಲಿ ನಿರ್ಮಾಪಕನಿಗೆ ಪಂಗನಾಮ! - undefined

ನಟ ಸಾಧು ಕೋಕಿಲಾ ಡೇಟ್​ ಕೊಡಿಸುವುದಾಗಿ ನಿರ್ಮಾಪಕ ಶಿವಶಂಕರ್​ಗೆ ಇಬ್ಬರು ವಂಚನೆ ಮಾಡಿದ್ದಾರೆ. ಈ ಬಗ್ಗೆ ಸದ್ಯ ಫಿಲ್ಮ್​ ಚೇಂಬರ್​ನಲ್ಲಿ ದೂರು ದಾಖಲಾಗಿದೆ.

ನಿರ್ಮಾಪಕನಿಗೆ ವಂಚನೆ

By

Published : Apr 27, 2019, 5:28 PM IST

Updated : Apr 27, 2019, 6:01 PM IST

ಬೆಂಗಳೂರು: ಹಾಸ್ಯ ನಟ ಸಾಧು ಕೋಕಿಲಾ ಹೆಸರಿನಲ್ಲಿ ನಿರ್ಮಾಪಕ ಶಿವಶಂಕರ್​​​ಗೆ ಹರಿಹರನ್ ಹಾಗೂ ಅವಿ ಎಂಬುವರು ವಂಚನೆ ಮಾಡಿದ್ದಾರೆ. ಸಾಧು ಅವರನ್ನು ಚಿತ್ರೀಕರಣಕ್ಕೆ ಕರೆತರುವುದಾಗಿ ಹೇಳಿ ನಿರ್ಮಾಪಕನಿಂದ ಹಣ ಪೀಕಿದ್ದಾರೆ ಎನ್ನಲಾಗಿದೆ.

ಆರೋಪಿ ಅವಿ

ಶಿವಶಂಕರ್, 'ರಾವಣ' ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗೆ ಸಾಧು ಅವರ ಒಂದು ದಿನದ ಡೇಟ್​ ಕೊಡಿಸುವುದಾಗಿ ಹೇಳಿದ್ದ ಅವಿ, ಕೋಕಿಲಾ ಅವರಿಗೆ ಒಂದು ಲಕ್ಷ ರೂ. ಸಂಭಾವನೆ ನೀಡಬೇಕು ಎಂದಿದ್ದನಂತೆ. ಜತೆಗೆ ಮುಂಗಡವಾಗಿ 35,000 ಪಡೆದುಕೊಂಡಿದ್ದ ಎನ್ನಲಾಗಿದೆ.

ನಿರ್ಮಾಪಕ ಶಿವಶಂಕರ್

ಇದೇ ತಿಂಗಳ 18ರಂದು ಹುಬ್ಬಳ್ಳಿಯಲ್ಲಿ ಎರಡು‌ ಲಕ್ಷ ಖರ್ಚು ಮಾಡಿ ಶೂಟಿಂಗ್​ಗೆ ರೆಡಿ ಮಾಡಿಸಿಕೊಳ್ಳಲಾಗಿತ್ತು. ಅದರೆ, ಸಾಧು ಶೂಟಿಂಗ್​ಗೆ ಬಂದಿರಲಿಲ್ಲ. ನಂತರ ಅವರಿಗೆ ಕಾಲ್ ಮಾಡಿ ವಿಚಾರಿಸಿದಾಗ ತಾವು ವಿದೇಶದಲ್ಲಿದ್ದು, ನಾನು ಯಾರ ಬಳಿಯು ಶೂಟಿಂಗ್​​ಗೆ ಬರುವುದಾಗಿ ಹೇಳಿಲ್ಲ ಎಂದಿದ್ದಾರೆ ಸಾಧು ಕೋಕಿಲಾ. ಈ ವೇಳೆ ತಾವು ಮೋಸ ಹೋಗಿರುವುದು ಶಿವಶಂಕರ್​ ಅರಿವಿಗೆ ಬಂದಿದೆ. ಈ ಬಗ್ಗೆ ಸದ್ಯ ಅವರು ಫಿಲ್ಮ್ ಚೇಂಬರ್​​ಗೆ ದೂರು ನೀಡಿದ್ದಾರೆ.

ರಾವಣ ಸಿನಿಮಾ ಪೋಸ್ಟರ್​
Last Updated : Apr 27, 2019, 6:01 PM IST

For All Latest Updates

TAGGED:

ABOUT THE AUTHOR

...view details