ಕರ್ನಾಟಕ

karnataka

ETV Bharat / sitara

ಈ 'ವೀಕೆಂಡ್​'ನಲ್ಲಿ ಬರ್ತಿದ್ದಾಳೆ 'ಡಾಟರ್ ಆಫ್​ ಪಾರ್ವತಮ್ಮ', 'ರೇಸ್'​ನಲ್ಲಿ ಗೆಲ್ಲುತ್ತಾ 'ಪುಟಾಣಿ ಪವರ್​'? - undefined

ಈ ಶುಕ್ರವಾರ ಕನ್ನಡದ ನಾಲ್ಕು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಪೈಕಿ ಅತೀ ಹೆಚ್ಚು ಬೆಂಬಲ ಸಿಕ್ಕಿರುವುದು ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರಕ್ಕೆ. ಇನ್ನುಳಿದ ಮೂರು ಸಿನಿಮಾಗಳಲ್ಲಿ ‘ವೀಕ್ ಎಂಡ್’, ಬಿಗ್​ಬಾಸ್​ ರನ್ನರ್​ಅಪ್​ ದಿವಾಕರ್ ಅವರ ರೇಸ್ ಸಿನಿಮಾ, ಹಾಗೂ ಮಕ್ಕಳ ಚಿತ್ರ ‘ಪುಟಾಣಿ ಪವರ್’ ರಿಲೀಸ್ ಆಗುತ್ತಿವೆ.

ಕನ್ನಡದ ನಾಲ್ಕು ಚಿತ್ರಗಳು

By

Published : May 22, 2019, 9:39 AM IST

ಡಾಟರ್ ಆಫ್ ಪಾರ್ವತಮ್ಮ:

ಡಾಟರ್ ಆಫ್ ಪಾರ್ವತಮ್ಮ ಸಿನಿಮಾ

ಇದು ನಟಿ ಹರಿಪ್ರಿಯಾ ಅವರ 25ನೇ ಸಿನಿಮಾ. 12 ವರ್ಷಗಳ ಅವರ ಸಿನಿ ಕರಿಯರ್​ನಲ್ಲಿ ಫಸ್ಟ್​ ಟೈಮ್​ ಪತ್ತೇದಾರಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಸುಮಲತಾ ಅಂಬರೀಶ್ ಪಾರ್ವತಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂರಜ್, ಪ್ರಭು, ತರಂಗ ವಿಶ್ವ ಸಹ ಪಾತ್ರವರ್ಗದಲ್ಲಿದ್ದಾರೆ.

ವೀಕ್ ಎಂಡ್ :

ವೀಕ್ ಎಂಡ್ ಸಿನಿಮಾ

ಹಿರಿಯ ನಟ ಅನಂತ್ ನಾಗ್ ತಾತನಾಗಿ ಮೊಮ್ಮಗನನ್ನು ಅನುಭವದ ವಿಚಾರ ಧಾರೆ ಹರಿಸಿ ಬೆಳಸಿ ಸರಿ ದಾರಿಗೆ ನಡೆಸುವುದು ಈ ಚಿತ್ರದ ಹೂರಣ. ಅಂದಿನ ಅನುಭವ ಇಂದಿನ ಬಿಸಿ ರಕ್ತದವರಿಗೆ ಅವಶ್ಯವಿಲ್ಲ ಎಂದೇ ಹೇಳುವ ಈ ಸಮಾಜದಲ್ಲಿ, ಹಲವು ತಿರುವುಗಳೊಂದಿಗೆ ನಿರ್ದೇಶಕ ಶೃಂಗೇರಿ ಸುರೇಶ್ ತೆರೆ ಮೇಲೆ ತಂದಿದ್ದಾರೆ. ಮಿಳಿಂದ್ ಈ ಚಿತ್ರಕ್ಕೆ ನಾಯಕ. ಇವರ ತಂದೆ ಡಿ.ಮಂಜುನಾಥ್ ಸಿನಿಮಾಕ್ಕೆ ಹಣ ಹಾಕಿದ್ದಾರೆ. ಸಂಜನಾ ಬುರ್ಲಿ ವೀಕ್ ಎಂಡ್​ ಸಿನಿಮಾ ನಾಯಕಿ. ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ್, ನಟ ಪ್ರಶಾಂತ್, ನೀತು ಬಾಲ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರೀ ತಾರಗಣದಲ್ಲಿದ್ದಾರೆ.

ರೇಸ್ :

ರೇಸ್ ಚಿತ್ರ

ಬಿಗ್ ಬಾಸ್ ರನ್ನರ್ ಅಪ್ ದಿವಾಕರ್ ಈ ಚಿತ್ರದ ಮೂಲಕ ನಾಯಕ ಆಗುತ್ತಿದ್ದಾರೆ. ಎಸ್​​​.ವಿ.ಆರ್ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಹೇಮಂತ್ ಕೃಷ್ಣ ನಿರ್ದೇಶನ, ಚಕ್ರವರ್ತಿ ಛಾಯಾಗ್ರಹಣ, ಕ್ರಾಂತಿ ಸಂಕಲನ, ರವಿ ಕಿರಣ್ ಸಂಗೀತ, ಮಂತ್ರ ಆನಂದ್ ಹಿನ್ನೆಲೆ ಸಂಗೀತ, ವೈ.ರವಿ ಸಾಹಸ, ಚಂದ್ರ ಕಿರಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ದಿವಾಕರ್ ಜೊತೆ ಸಂತೋಷ್, ನಕುಲ್, ಗೋವಿಂಡ್, ರಕ್ಷ ಶೇನೊಯ್, ಶ್ರುತಿ ಹಾಗೂ ಇತರರು ತಾರಾಬಳಗದಲ್ಲಿದ್ದಾರೆ.

ಪುಟಾಣಿ ಪವರ್ :

ಪುಟಾಣಿ ಪವರ್ ಸಿನಿಮಾ

ಬೇಸಿಗೆ ರಜೆ ಮುಗಿಯುವ ಸಮಯಕ್ಕೆ ಈ ಮಕ್ಕಳ ಚಿತ್ರ ಪುಟಾಣಿ ಪವರ್ ತೆರೆಯ ಮೇಲೆ ಹಾಜರಾಗುತ್ತಿದೆ. ಎಸ್​​​​.ವಿ.ಕ್ರಿಯೇಷನ್​​ಲ್ಲಿ ರಾಜಶೇಖರ್ ವಿ.ಎಂ ನಿರ್ಮಾಣ ಮಾಡಿರುವ ಚಿತ್ರಕ್ಕೆ ಎಂ ಗಜೇಂದ್ರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದಾರೆ. ವಿಜಯ್ ಕೃಷ್ಣ ಸಂಗೀತ, ಜೀವ ಅಂಥೋನಿ ಛಾಯಾಗ್ರಹಣ, ಶ್ರೀಜವಳಿ ಸಂಕಲನ, ಹಾಡುಗಳನ್ನು ಎಂ.ಗಜೇಂದ್ರ, ಸುನಿಲ ಹರದೂರು, ರಂಗನಾಥ್ ಎನ್ ಬರೆದಿದ್ದಾರೆ.

ಆರಾಧನ ಭಟ್, ಮಹೇಂದ್ರ ಮುನ್ನೋತ್, ಪದ್ಮಶ್ರೀ ದೊಡ್ಡರಗೆ ಗೌಡ, ಹರಿಣಿ, ಪ್ರೀತಿ ರಾಜ್, ಬದ್ರಿ, ಶ್ರೀರಕ್ಷ, ಅಕ್ಷಯ್, ಐಶ್ವರ್ಯ, ಮನೋಜ್ ಮುಂತಾದವರು ತಾರಗಣದಲ್ಲಿದ್ದಾರೆ.

For All Latest Updates

TAGGED:

ABOUT THE AUTHOR

...view details