ಕರ್ನಾಟಕ

karnataka

ETV Bharat / sitara

ಬುರ್ಜ್ ಖಲೀಫಾ ಹಾಡಿಗೆ ದುಬೈನಲ್ಲಿ ಸುಡುವ ಮರಳಿನಲ್ಲೇ ಕಿಯಾರ ಸ್ಟೆಪ್ಸ್ - ಲಕ್ಷ್ಮಿ ಬಾಂಬ್

ಲಕ್ಷ್ಮಿ ಬಾಂಬ್ ಚಿತ್ರದ 'ಬುರ್ಜ್ ಖಲೀಫಾ' ಹಾಡಿಗಾಗಿ ನಟಿ ಕಿಯಾರ ಅಡ್ವಾಣಿ ದುಬೈನ ಸುಡುವ ಮರಳುಗಾಡಿನಲ್ಲಿ ಬರಿಗಾಲಿನಲ್ಲಿ ಹೆಜ್ಜೆ ಹಾಕಿದ್ದಾರೆ.

kiara advani
ಲಕ್ಷ್ಮಿ ಬಾಂಬ್ ಚಿತ್ರ

By

Published : Oct 18, 2020, 1:04 PM IST

ನವದೆಹಲಿ: ನಟ ಅಕ್ಷಯ್​ ಕುಮಾರ್​ ನಟನೆಯ ಮುಂಬರುವ ಲಕ್ಷ್ಮಿ ಬಾಂಬ್ ಚಿತ್ರದ 'ಬುರ್ಜ್ ಖಲೀಫಾ' ಹಾಡಿಗೆ ದುಬೈನಲ್ಲಿ ಸುಡುವ ಮರುಭೂಮಿಯ ಮರಳಿನ ಮೇಲೆ ಬರಿಗಾಲಿನಿಂದ ನೃತ್ಯ ಮಾಡಿದ್ದಾಗಿ ನಟಿ ಕಿಯಾರಾ ಅಡ್ವಾಣಿ ಹೇಳಿದ್ದಾರೆ.

ಹಾಡಿನ ಚಿತ್ರೀಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟಿ ಕಿಯಾರಾ, ಬುರ್ಜ್ ಖಲೀಫಾ ಸಾಂಗ್​ ಶೂಂಟಿಗ್​ ವೇಳೆ ಸಖತ್​ ಎಂಜಾಯ್​ ಮಾಡಿರುವುದಾಗಿ ತಿಳಿಸಿದ್ದಾರೆ.

ಒಂದು ಕಮರ್ಷಿಯಲ್ ಸಿನಿಮಾ ಮಾಡಿದ್ರೂ ​ನಮ್ಮನ್ನು ನಟಿ ಎಂದೇ ಪರಿಗಣಿಸಲಾಗುತ್ತೆ, ಹೀಗಿದ್ದಾಗ ಸಿನಿಮಾ ಅಂತ ಬಂದ್ರೆ ಚಳಿಯಲ್ಲೂ ಶಿಫಾನ್​ ಸ್ಯಾರಿ ಹಾಕಬೇಕಾಗುತ್ತೆ, ಮರಳುಗಾಡಿನಲ್ಲೂ ಬರಿ ಕಾಲಿನಲ್ಲಿ ಹೆಜ್ಜೆ ಹಾಕಬೇಕಾಗುತ್ತೆ ಎಂದು ಕಿಯಾರಾ ಹೇಳಿಕೊಂಡಿದ್ದಾರೆ.

ರಾಘವ ಲಾರೆನ್ಸ್ ನಿರ್ದೇಶನದ ಅಕ್ಷಯ್​ ಕುಮಾರ್​ ಹಾಗೂ ಕಿಯಾರಾ ಅಡ್ವಾಣಿ ನಟನೆಯ ಲಕ್ಷ್ಮಿ ಬಾಂಬ್‌ ಚಿತ್ರದ ಟ್ರೈಲರ್ ಇತ್ತಿಚೆಗೆ ಆನ್​‌ಲೈನ್‌ನಲ್ಲಿ ಬಿಡುಗಡೆಯಾಗಿದೆ.

ABOUT THE AUTHOR

...view details