ಒಂದೆಡೆ ದೇಶದ ಜನತೆಗೆ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮ ಆದರೆ ಮತ್ತೊಂದೆಡೆ ಚಿತ್ರರಂಗದ ಕೆಲವು ಸೆಲಬ್ರಿಟಿಗಳಿಗೆ ಹುಟ್ಟುಹಬ್ಬದ ಸಂಭ್ರಮ. ಇಂದು ರಾಘವೇಂದ್ರ ರಾಜ್ಕುಮಾರ್, ಹಿರಿಯ ನಟಿ ಭಾರತಿ, ನಾಗತಿಹಳ್ಳಿ ಚಂದ್ರಶೇಖರ್, ಅರ್ಜುನ್ ಸರ್ಜಾ, ಸುಹಾಸಿನಿ ಹುಟ್ಟಿದ ದಿನ.
ಈ ಬಾರಿ ಕೊರೊನಾ ಕಾಟ ಇರುವುದರಿಂದ ಯಾವ ಸೆಲಬ್ರಿಟಿಗಳು ಕೂಡಾ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಸುಹಾಸಿನಿ ಹಾಗೂ ಅರ್ಜುನ್ ಸರ್ಜಾ ತಮ್ಮ ನಿವಾಸದಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರೆ ಭಾರತಿ ವಿಷ್ಣುವರ್ಧನ್ ಕೂಡಾ ಬೆಂಗಳೂರಿನ ಮನೆಯಲ್ಲಿ ಮೊಮ್ಮಕ್ಕಳು, ಮಗಳು ಅಳಿಯನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ರಾಘವೇಂದ್ರ ರಾಜ್ಕುಮಾರ್ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಇಬ್ಬರ ಹುಟ್ಟುಹಬ್ಬ ಸ್ವಲ್ಪ ವಿಭಿನ್ನವಾಗಿದೆ.
ಸ್ಯಾಂಡಲ್ವುಡ್ ಮೇಷ್ಟ್ರು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ಒಂದು ಪುಸ್ತಕ ಬಿಡುಗಡೆ ಮಾಡುತ್ತಿದ್ದರು. ಆದರೆ ಈ ಬಾರಿ ಅವರು ಯಾವುದೇ ಪುಸ್ತಕ ಬಿಡುಗಡೆ ಮಾಡುತ್ತಿಲ್ಲ. ಬದಲಿಗೆ ಜೂಮ್ ಮೂಲಕ ತಮ್ 'ಟೆಂಟ್' ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಸಿನಿಮಾ, ಸಾಹಿತ್ಯ ಹಾಗೂ ಸಮಾಜ ವಿಷಯಗಳ ಬಗ್ಗೆ ವಿಧ್ಯಾರ್ಥಿಗಳು ಕೇಳುವ ಪ್ರಶ್ನೆಗೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉತ್ತರ ನೀಡಲಿದ್ದಾರೆ.
'ಆಡಿಸಿದಾತ' ಚಿತ್ರಕ್ಕೆ ಶುಭ ಕೋರಿದ ಅಭಿಮಾನಿಗಳು ಇನ್ನು ರಾಘವೇಂದ್ರ ರಾಜ್ಕುಮಾರ್ ಕಳೆದ ವರ್ಷ 'ಅಮ್ಮನ ಮನೆ' ಚಿತ್ರದ ಮೂಲಕ ಬಹಳ ವರ್ಷಗಳ ನಂತರ ಮತ್ತೆ ಆ್ಯಕ್ಟಿಂಗ್ ಆರಂಭಿಸಿದ್ದರು. ಈ ಬಾರಿ ಗಣೇಶ ಹಬ್ಬದಂದು ರಾಘವೇಂದ್ರ ರಾಜ್ಕುಮಾರ್ ಅಭಿನಯದ 'ಆಡಿಸಿದಾತ' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಜೊತೆಗೆ ಅಭಿಮಾನಿಗಳು ಕೂಡಾ 'ಆಡಿಸಿದಾತ' ಚಿತ್ರಕ್ಕೆ ಶುಭ ಕೋರಿದ್ದಾರೆ.
ಆಡಿಸಿದಾತ ಎಸ್. ಗೋವಿಂದ ರಾಜು ಹಾಗೂ ನಾಗರಾಜ್ ಅವರ ಸಹಕಾರದೊಂದಿಗೆ ತಯಾರಾಗುತ್ತಿರುವ ಸಿನಿಮಾ. ಚಿತ್ರವನ್ನು ದುರ್ಗದ ಹುಲಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಹಾಲೇಶ್ ಹೆಚ್. ನಿರ್ಮಿಸುತ್ತಿದ್ದು ಫಣೀಶ್ ಭಾರಧ್ವಾಜ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡಾ ಫಣೀಶ್ ಅವರದ್ದೇ. ಚಿತ್ರದ ಹಾಡುಗಳಿಗೆ ಮಣಿಕಾಂತ್ ಖದ್ರಿ ಸಂಗೀತವಿದ್ದರೆ ಚಿತ್ರಕ್ಕೆ ಆನಂದ್ ಇಳಯರಾಜ ಛಾಯಾಗ್ರಹಣ, ಬಾಲ ನೃತ್ಯ, ಹರೀಶ್ ಕೊಮ್ಮಿ ಸಂಕಲನ ಇದೆ.
ನಾಗತಿಹಳ್ಳಿ ಚಂದ್ರಶೇಖರ್ ಜೂಮ್ ಮಾತುಕತೆ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ಯಾವ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೆ ಚಿತ್ರ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶವನ್ನೊಳಗೊಂಡಿದೆ ಎನ್ನಲಾಗಿದೆ. ಚಿತ್ರದಲ್ಲಿ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್, ಗುರುದತ್, ಬಲರಾಜ್, ಸುಷ್ಮಿತಾ ದಾಮೋದರ್ ಹಾಗೂ ಇತರರು ನಟಿಸಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.