ಅಲ್ಲಿ, ಇಲ್ಲಿ ಅಲೆಯುತ್ತಾ ಸಾರ್ವಜನಿಕ ಸ್ಥಳಗಳಲ್ಲಿ ಕಿರಿಕ್ ಮಾಡಿಕೊಂಡಿದ್ದ ಫೈರಿಂಗ್ ಸ್ಟಾರ್ ಹುಚ್ಚು ವೆಂಕಟ್ ಮತ್ತೆ ಗಾಂಧಿನಗರ ಪ್ರವೇಶಿಸಿದ್ದಾರೆ. ಹುಚ್ಚ ವೆಂಕಟ್ ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ. ಆದರೆ ಚಿತ್ರವೊಂದಕ್ಕೆ ಹಾಡು ಹಾಡಿದ್ದಾರೆ.
ಐದು ವರ್ಷಗಳ ನಂತರ ಮತ್ತೆ ಸ್ಯಾಂಡಲ್ವುಡ್ಗೆ ಬಂದ್ರು ಫೈರಿಂಗ್ ಸ್ಟಾರ್ - ಮಾಜರ್ ಚಿತ್ರಕ್ಕಾಗಿ ಹಾಡು ಹಾಡಿದ ಫೈರಿಂಗ್ ಸ್ಟಾರ್
2015 ರಲ್ಲಿ ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಪರಪಂಚ' ಚಿತ್ರಕ್ಕಾಗಿ 'ಹುಟ್ಟಿದಾ ಊರನು ಬಿಟ್ಟು ಬಂದಾ ಮೇಲೆ' ಎಂಬ ಹಾಡನ್ನು ಹಾಡಿದ್ದರು. ಇದೀಗ ಸುಮಾರು 5 ವರ್ಷಗಳ ನಂತರ 'ಮಾಜರ್' ಎಂಬ ಚಿತ್ರಕ್ಕೆ ಹುಚ್ಚ ವೆಂಕಟ್ ಹಾಡೊಂದನ್ನು ಹಾಡಿದ್ದಾರೆ.
2015 ರಲ್ಲಿ ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ 'ಪರಪಂಚ' ಚಿತ್ರಕ್ಕಾಗಿ 'ಹುಟ್ಟಿದಾ ಊರನು ಬಿಟ್ಟು ಬಂದಾ ಮೇಲೆ' ಎಂಬ ಹಾಡನ್ನು ಹಾಡಿದ್ದರು. ಇದೀಗ ಸುಮಾರು 5 ವರ್ಷಗಳ ನಂತರ 'ಮಾಜರ್' ಎಂಬ ಚಿತ್ರಕ್ಕೆ ಹುಚ್ಚ ವೆಂಕಟ್ ಹಾಡೊಂದನ್ನು ಹಾಡಿದ್ದಾರೆ. ಇದು ಸಾಮಾಜಿಕ ಸಂದೇಶ ಸಾರುವ ಚಿತ್ರವಾಗಿದ್ದು ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದನ್ನು ಈ ಚಿತ್ರದಲ್ಲಿ ಎಳೆ ಎಳೆಯಾಗಿ ತೋರಿಸಲಾಗಿದೆಯಂತೆ. 'ಧರೆಗೆ ದೊಡ್ಡವರು' ಎಂಬ ಹೆಣ್ಣಿನ ಕುರಿತಾದ ಈ ಹಾಡನ್ನು ಹುಚ್ಚ ವೆಂಕಟ್ ಹಾಡಿದ್ದಾರೆ. ಈ ಹಾಡಿಗೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ. ಚಿತ್ರವನ್ನು ಲೋಕಲ್ ಲೋಕಿ ನಿರ್ದೇಶಿಸಿದ್ದಾರೆ. ಶೀಘ್ರದಲ್ಲೇ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ.