ಕರ್ನಾಟಕ

karnataka

ETV Bharat / sitara

ತಲ್ವಾರ್​ನಲ್ಲಿ ಕೇಕ್​​ ಕತ್ತರಿಸಿ ಇಕ್ಕಟ್ಟಿಗೆ ಸಿಲುಕಿದ ಕರಿ ಚಿರತೆ: ದುನಿಯಾ ವಿಜಯ್​​ ವಿರುದ್ಧ ಕೇಸ್​

ತಲ್ವಾರ್​​ನಿಂದ ಕೇಕ್‌ ಕತ್ತರಿಸಿ ಸುದ್ದಿಯಾಗಿದ್ದ ನಟ ದುನಿಯಾ ವಿಜಯ್ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅವರ ವಿರುದ್ಧ ಗಿರಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

FIR against duniya vijay in girinagara police station
ತಲ್ವಾರ್​ನಲ್ಲಿ ಕೇಕ್​​ ಕತ್ತರಿಸಿದ್ದಕ್ಕೆ ದುನಿಯಾ ವಿಜಯ್​​ ವಿರುದ್ಧ ಕೇಸ್​​ ದಾಖಲು!

By

Published : Jan 23, 2020, 4:39 PM IST

ಬೆಂಗಳೂರು: ಹುಟ್ಟುಹಬ್ಬದ ದಿನದಂದೇ ತಲ್ವಾರ್​​ನಿಂದ ಕೇಕ್‌ ಕತ್ತರಿಸಿ ಸುದ್ದಿಯಾಗಿದ್ದ ನಟ ದುನಿಯಾ ವಿಜಯ್ ವಿರುದ್ಧ ಗಿರಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಐಪಿಸಿ ಸೆಕ್ಷನ್ 283ರ ಅಡಿಯಲ್ಲಿ‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಳೆದ ಮಂಗಳವಾರ ರಾತ್ರಿ ವಿಜಯ್ ಹುಟ್ಟುಹಬ್ಬ ಪ್ರಯುಕ್ತ ಮನೆ ಬಳಿ ಅಭಿಮಾನಿಗಳ ಜೊತೆಗೂಡಿ ತಲ್ವಾರ್​ನಿಂದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದರು.

ಬರ್ತ್ ಡೇಗೆ ಕತ್ತಿಯಿಂದ ಕೇಕ್​ ಕಟ್​ ಮಾಡಿದ ದುನಿಯಾ ವಿಜಿ!

ತಡರಾತ್ರಿಯಾದರೂ ರಸ್ತೆಯಲ್ಲಿ ಧ್ವನಿವರ್ಧಕ ಬಳಸಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಪರಿಣಾಮ‌ ಸಾರ್ವಿಜನಿಕರು ಕಿರಿ‌ಕಿರಿ ಅನುಭವಿಸಿದ್ದರು. ಅಲ್ಲದೆ ಈ ಸಂಭ್ರಮಾಚರಣೆಗೆ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ.‌ ‌ಬರ್ತಡೇ ಆಚರಣೆ ದೃಶ್ಯ ಸಾಮಾಜಿಕ‌‌ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಗಿರಿ ನಗರ ಪೊಲೀಸರು ವಿಜಯ್​ಗೆ ನೊಟೀಸ್ ನೀಡಿದ್ದರು.

ಇದರಂತೆ ಇಂದು ಪೊಲೀಸ್​ ಠಾಣೆಗೆ ಹಾಜರಾಗಿದ್ದ ನಟ ವಿಜಯ್​, ತಲ್ವಾರ್ ನನ್ನದಲ್ಲ, ಅಭಿಮಾನಿಗಳು ಉಡುಗೊರೆ ನೀಡಿದ್ದರು. ಆತುರದಲ್ಲಿ ಅದರಲ್ಲೇ ಕೇಕ್ ಕತ್ತರಿಸಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details