ಮುಂಬೈ: ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ 'ತೇರೆ ಬಿನಾ..' ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ಆ ಹಾಡಿನ ಕೊನೆಯಲ್ಲಿ ಸಲ್ಮಾನ್ ಖಾನ್ ಮಗಳಾಗಿ ಬರುವ ಮುದ್ದು ಹುಡುಗಿ ನೆಟಿಜನ್ ಗಮನ ಸೆಳೆದಿದ್ದಾಳೆ.
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಮುದ್ದಾದ ಕಿಡ್ಡೋ ಯಾರೆಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಡಿಯೋದ ಕೊನೆಯಲ್ಲಿ ಕಾಣಿಸಿಕೊಂಡಿರುವ ಸಲ್ಮಾನ್ ಅವರ ತೆರೆಯ ಮೇಲಿನ ಮಗಳು ಬೇರೆ ಯಾರೂ ಅಲ್ಲ ಆಕೆ ವಾಲುಶ್ಚಾ ಡಿ ಸೂಸಾ ಅವರ ಕಿರಿಯ ಮಗಳು ಸಿಯೆನ್ನಾ.