ಬಿಗ್ ಬಾಸ್ ಫಿನಾಲೆಗೆ ಇನ್ನೂ 15 ದಿನಗಳು ಬಾಕಿ ಇರುವಂತೆಯೇ ಇಬ್ಬರು ಸ್ಪರ್ಧಿಗಳು ಫಿನಾಲೆ ಹಂತಕ್ಕೆ ಬಂದಿದ್ದಾರೆ. ಈ ಬಗ್ಗೆ ಇಂದು ಅಥವಾ ನಾಳೆ ಕಿಚ್ಚ ಸುದೀಪ್ ಘೋಷಿಸುವ ಸಾಧ್ಯತೆಯೂ ಇದೆ.
ಕುರಿ ಪ್ರತಾಪ್ ಹಾಗೂ ವಾಸುಕಿ ವೈಭವ್ ಫಿನಾಲೆಗೆ ತಲುಪಿದ ಮೊದಲ ಇಬ್ಬರು ಸ್ಪರ್ಧಿಗಳಾಗಿದ್ದಾರೆ. ಫಿನಾಲೆಗೆ ಯಾರೆಲ್ಲಾ ತಲುಪಬಹುದು ಎಂಬ ಕುತೂಹಲ ಕೊಂಚ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು. ಈ ಇಬ್ಬರು ಸ್ಪರ್ಧಿಗಳ ಅತ್ಯುತ್ತಮ ಆಟದ ಮೂಲಕ ಫಿನಾಲೆಗೆ ತಲುಪುವುದು ಸಾಬೀತಾಗಿದೆ.
ಕುರಿ ಪ್ರತಾಪ್ ಎಂದಿನಂತೆ ತಮ್ಮ ಹಾಸ್ಯಮಯ ಮಾತುಗಳು ಹಾಗೂ ಆಟಗಳಲ್ಲಿ ತೊಡಗಿಸಿಕೊಳ್ಳುವಿಕೆ ಮೂಲಕ ಹೆಚ್ಚು ವೋಟ್ ಪಡೆದುಕೊಂಡಿದ್ದಾರೆ. ಇನ್ನೂ ವಾಸುಕಿ ವೈಭವ್ ತಮ್ಮ ಹಾಡು ಕಟ್ಟುವುದು ಮತ್ತು ಆಟದ ಮೂಲಕ ವೀಕ್ಷಕರ ಗಮನ ಸೆಳೆದಿದ್ದಾರೆ.
ವಾಸುಕಿ ಮತ್ತು ಕುರಿ ಪ್ರತಾಪ್ ಈ ವಾರ ನಡೆದ ಲಕ್ಸುರಿ ಬಜೆಟ್ ಟಾಸ್ಕ್ನಲ್ಲಿ ಕುರಿಪ್ರತಾಪ್ ಹಾಗೂ ವಾಸುಕಿ ವೈಭವ್ 800 ಪಾಯಿಂಟ್ಸ್ ಪಡೆದುಕೊಂಡರು. ಹೀಗಾಗಿ ಮುಂದಿನ ವಾರದ ತನಕ ಇಮ್ಯೂನಿಟಿ ಸಿಕ್ಕಿದ್ದು, ಯಾರು ನಾಮೀನೆಟ್ ಮಾಡುವ ಹಾಗಿಲ್ಲ. ಹೀಗಾಗಿ ಫಿನಾಲೆಗೆ ಹೋಗುವುದು ಖಚಿತವಾಗಿದೆ.
ಬಿಗ್‌ಬಾಸ್ ಮನೆಯಲ್ಲಿ 85ನೇ ದಿನಕ್ಕೆ ಕಾಲಿಟ್ಟಿರುವ ಈ ಸ್ಪರ್ಧಿಗಳು ಇದುವರೆಗೂ ಅತ್ಯುತ್ತಮ ಆಟಗಳನ್ನು ಪ್ರದರ್ಶಿಸಿದ್ದಾರೆ. ಮುಂದಿನವಾರ ನಾಮೀನೇಷನ್ ಪ್ರಕ್ರಿಯೆ ಇರುವುದಿಲ್ಲ. ಹೀಗಾಗಿ ಫಿನಾಲೆಯಲ್ಲಿ ಕುರಿ ಪ್ರತಾಪ್ ಹಾಗೂ ವಾಸುಕಿ ವೈಭವ್ ಇರಲಿದ್ದಾರೆ. ಆದರೆ, ಇವರೊಂದಿಗೆ ಇರುವ ಇನ್ನೂ ಮೂವರು ಸ್ಪರ್ಧಿಗಳು ಯಾರೆಂಬ ಕುತೂಹಲ ಮೂಡಿದೆ.