ಕರ್ನಾಟಕ

karnataka

ETV Bharat / sitara

ಐಟಿ ಸಾಧನೆ, ಸಮಾಜಸೇವೆ: ಸಿನಿಮಾ ಆಗಲಿದೆ ಇನ್ಫೋಸಿಸ್​ ದಂಪತಿ ಜೀವನಗಾಥೆ - ಕಂಗನಾ ರಣಾವತ್​

ಕರುನಾಡಿನ ಹೆಮ್ಮೆಯ ಸುಧಾ ಮೂರ್ತಿ ಹಾಗೂ ಇನ್ಫೋಸಿಸ್​ ಕಂಪನಿ ಸಂಸ್ಥಾಪಕ ನಾರಾಯಣ ಮೂರ್ತಿ ಜೀವನ ಹಾಗೂ ಸಾಧನೆ ಸಿನಿಮಾ ರೂಪದಲ್ಲಿ ಮೂಡಿ ಬರಲಿದೆ.

ನಾರಾಯಣ ಮೂರ್ತಿ

By

Published : Aug 10, 2019, 12:49 PM IST

ಸಾಫ್ಟ್​​ವೇರ್​ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಹಾಗೂ ಸಾಮಾಜಮುಖಿ ಕಾರ್ಯಗಳಿಂದ ದೊಡ್ಡ ಹೆಸರು ಮಾಡಿರುವ ನಾರಾಯಣ ಹಾಗೂ ಸುಧಾ ಮೂರ್ತಿ ಬಯೋಪಿಕ್ ರೆಡಿಯಾಗಲಿದೆ. ತಮ್ಮ ಕುರಿತು ಸಿನಿಮಾ ಮಾಡಲು ಈ ದಂಪತಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ.

ಬಾಲಿವುಡ್​ ಸಿನಿಮಾ ನಿರ್ದೇಶಕಿ ಅಶ್ವಿನಿ ಅಯ್ಯರ್​​ ತಿವಾರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳಲಿದ್ದಾರೆ. ಇವರ ಪತಿ ನಿತಿಶ್​ ತಿವಾರಿ ಸಿನಿಮಾಗೆ ಹಣ ಹೂಡಲಿದ್ದಾರೆ. ಅಶ್ವಿನಿ ಸದ್ಯ ಕಂಗನಾ ರಣಾವತ್​ ಅವರ ಪಂಗಾ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.

ದೇಶ ಕಂಡ ಈ ಅಪ್ರತಿಮ ದಂಪತಿ ವೀಕೆಂಡ್ ವಿಥ್​ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈಗ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ಬರಲು ತಯಾರಿ ನಡೆಸಲಾಗುತ್ತಿದೆ.

ಐಟಿ ಕ್ಷೇತ್ರ ಅಲ್ಲದೆ ಸಮಾಜದಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿರುವ ಈ ದಂಪತಿ ಪಾತ್ರ ಯಾರು ಮಾಡ್ತಾರೆ ಎನ್ನುವುದು ಈಗ ಚರ್ಚೆಯಾಗುತ್ತಿದೆ. 2020ರಲ್ಲಿ ಈ ಚಿತ್ರ ಚಿತ್ರೀಕರಣ ಪ್ರಾರಂಭಿಸಿ, ಅದೇ ವರ್ಷ ಬಿಡುಗಡೆ ಸಹ ಮಾಡುವ ಲೆಕ್ಕಾಚಾರವಿದೆ. ಚಿತ್ರಕರ್ಮಿ ಸಂಜಯ್ ತ್ರಿಪಾಠಿ ಅವರು ಎನ್. ಆರ್ ನಾರಾಯಣ ಮೂರ್ತಿ ಅವರ ಜೀವನಗಾಥೆ ಕುರಿತ ಚಿತ್ರದ ಕಥೆ ಸಿದ್ಧಪಡಿಸಿಕೊಂಡಿದ್ದಾರೆ. ಈ ಸಿನಿಮಾ ಯಾವ ಭಾಷೆಯಲ್ಲಿ ಸಿದ್ಧವಾಗಲಿದೆ ಎಂಬುದು ಇನ್ನೂ ಅಂತಿಮವಾಗಿಲ್ಲ.

ABOUT THE AUTHOR

...view details