ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇಂದು ಆರ್‌ಜಿಐ ವಿಮಾನ ನಿಲ್ದಾಣ ಪಿಎಸ್‌ಗೆ ಭೇಟಿ ನೀಡಿ ಹೈದರಾಬಾದ್ ಪಶುವೈದ್ಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಆಧರಿಸಿದ ತಮ್ಮ ಚಲನಚಿತ್ರ ಯೋಜನೆಗಾಗಿ ಮಾಹಿತಿ ಸಂಗ್ರಹಿಸಿದ್ದಾರೆ.
ಹೈದರಾಬಾದ್ ಪಶುವೈದ್ಯೆ ರೇಪ್ ಕುರಿತು ಸಿನಿಮಾ ಮಾಡ್ತಿದ್ದಾರಂತೆ ಆರ್ಜಿವಿ - ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ಹೈದರಾಬಾದ್ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಆಧರಿಸಿದ ಸಿನೆಮಾವನ್ನು ನಿರ್ಮಾಣ ಮಾಡಲು ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಸಕ್ತರಾಗಿದ್ದು,ಇಂದು ಆರ್‌ಜಿಐ ವಿಮಾನ ನಿಲ್ದಾಣ ಪಿಎಸ್‌ಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
ರಾಮ್ ಗೋಪಾಲ್ ವರ್ಮಾ
ಈ ಬಗ್ಗೆ ಮಾತನಾಡಿದ ಅವರು, ಘಟನೆಯ ಬಗ್ಗೆ ಮಾಹಿತಿ ಮತ್ತು ಸಂಶೋಧನೆಗಳನ್ನು ಸಂಗ್ರಹಿಸಲು ಶಂಶಾಬಾದ್ ಎಸಿಪಿಯನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೇನೆ, ಇದು ನನಗೆ ಚಿತ್ರವನ್ನು ಸರಿಯಾಗಿ ಸ್ಕ್ರಿಪ್ಟ್ ಮಾಡಲು ನನಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.