ಕರ್ನಾಟಕ

karnataka

ETV Bharat / sitara

ನಾಳಿನ ಬಂದ್​​ಗೆ ಚಿತ್ರರಂಗದ ಬೆಂಬಲ ಇಲ್ಲ...ಫಿಲ್ಮ್​ ಚೇಂಬರ್ ಅಧ್ಯಕ್ಷ ಡಿ.ಆರ್. ಜೈರಾಜ್​​​​​ ಸ್ಪಷ್ಟನೆ - ನಾಳಿನ ಬಂದ್​​​​​ಗೆ ಚಿತ್ರರಂಗದ ಬೆಂಬಲ ಇಲ್ಲ

ನಾಳೆ ನಡೆಯುವ ಭಾರತ್ ಬಂದ್​​​ಗೆ ಕನ್ನಡ ಚಿತ್ರರಂಗವಾಗಲಿ, ವಾಣಿಜ್ಯ ಮಂಡಳಿಯಾಗಲಿ ಬೆಂಬಲ ನೀಡುವುದಿಲ್ಲ. ಬಂದ್​​​​​ಗೆ ಬೆಂಬಲ ನೀಡುವ ಬದಲಿಗೆ ತಟಸ್ಥವಾಗಿ ಇರಲು ನಿರ್ಧರಿಸಿದ್ದೇವೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಸ್ಪಷ್ಟಪಡಿಸಿದ್ದಾರೆ.

Film chamber president Jayraj
ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್

By

Published : Jan 7, 2020, 7:11 PM IST

ನಾಳೆ ವಿವಿಧ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್​​​ಗೆ ಕರೆ ಕೊಟ್ಟಿದ್ದು , ನಾಳಿನ ಬಂದ್​​​​​​ಗೆ ಕನ್ನಡ ಚಿತ್ರರಂಗದ ಬೆಂಬಲ ಇಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್​​​. ಜೈರಾಜ್ ಹೇಳಿದ್ದಾರೆ.

ನಾಳಿನ ಬಂದ್​​ಗೆ ಚಿತ್ರರಂಗದ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ ಡಿ.ಆರ್. ಜೈರಾಜ್

ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗ ಆರ್ಥಿಕ ಸಂಕಷ್ಟದಲ್ಲಿದೆ, ಹೀಗಿರುವಾಗ ಬಂದ್​​​ಗೆ ಬೆಂಬಲ ನೀಡಿ ನಷ್ಟ ಉಂಟು ಮಾಡಿಕೊಳ್ಳಲು ಆಗುವುದಿಲ್ಲ, ಅಲ್ಲದೆ ಬಂದ್​​​ಗೆ ಬೆಂಬಲ ಕೊಡುವಂತೆ ಇದುವರೆಗೂ ಯಾವುದೇ ಸಂಘಟನೆಗಳು ವಾಣಿಜ್ಯ ಮಂಡಳಿಯನ್ನು ಸಂಪರ್ಕಿಸಿಲ್ಲ. ಹಾಗಾಗಿ ನಾಳೆ ನಡೆಯುವ ಭಾರತ್ ಬಂದ್​​​ಗೆ ಕನ್ನಡ ಚಿತ್ರರಂಗವಾಗಲಿ, ವಾಣಿಜ್ಯ ಮಂಡಳಿಯಾಗಲಿ ಬೆಂಬಲ ನೀಡುವುದಿಲ್ಲ. ಈ ಬಗ್ಗೆ ನಾನು ಚಿತ್ರರಂಗದ ಗಣ್ಯರೊಂದಿಗೆ ಮಾತನಾಡಿದ್ದೇನೆ. ನಾಳೆ ಎಂದಿನಂತೆ ಶೂಟಿಂಗ್, ಚಿತ್ರಪ್ರದರ್ಶನ ಸೇರಿದಂತೆ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ನಡೆಯಲಿವೆ. ಬಂದ್​​​​​ಗೆ ಬೆಂಬಲ ನೀಡುವ ಬದಲಿಗೆ ತಟಸ್ಥವಾಗಿ ಇರಲು ನಿರ್ಧರಿಸಿದ್ದೇವೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಸ್ಪಷ್ಟಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details