ಸರ್ಕಾರ ಹೇಳಿರುವ ಎಲ್ಲಾ ಮುನ್ನೆಚ್ಚರಿಕೆ ವಹಿಸಿ ಶೂಟಿಂಗ್ ಮಾಡುವಂತೆ ನಿರ್ಮಾಪಕರಿಗೆ ವಾಣಿಜ್ಯ ಮಂಡಳಿ ಕಡೆಯಿಂದ ತಿಳಿಸಲಾಗಿದೆ ಎಂದು ಕರ್ನಾಟಕ ಚನಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಹೇಳಿದ್ದಾರೆ.
ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಟ್ಟಿರುವುದು ಚಿತ್ರರಂಗಕ್ಕೆ ಖುಷಿಯ ವಿಚಾರ: ಗುಬ್ಬಿ ಜೈರಾಜ್ - ಅಧ್ಯಕ್ಷ ಗುಬ್ಬಿ ಜೈರಾಜ್
ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಆದ್ರೆ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದು ಖುಷಿಯ ವಿಚಾರವೆಂದು ಕರ್ನಾಟಕ ಚನಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಹೇಳಿದ್ದಾರೆ.
ಸದ್ಯ ಆಷಾಢ ಇರುವ ಕಾರಣ ಯಾವುದೇ ಹೊಸ ಚಿತ್ರಗಳು ಶುರುವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಹೊಸ ಚಿತ್ರಗಳಿಗೆ ಅವಕಾಶ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ನಿರ್ಮಾಪಕರು ಬಹಳ ಎಚ್ಚರಿಕೆ ವಹಿಸಿ ಚಿತ್ರೀಕರಣ ಮಾಡಿಸುವಂತೆ ನಿರ್ಮಾಪಕರಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದರು.
ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಕೇಂದ್ರದ ಗೈಡ್ಲೈನ್ಸ್ ಬಂದ ಮೇಲೆ ಥಿಯೇಟರ್ ತೆರೆಯಲು ಅನುಮತಿ ನೀಡಿದ ಮೇಲೆನೇ ತೆರೆಯಬೇಕು. ಜುಲೈನಲ್ಲಿ ಚಿತ್ರಮಂದಿರಗಳ ಓಪನ್ ಮಾಡಲು ಅನುಮತಿ ನೀಡುತ್ತಾರೆ ಎಂಬ ಆಶಾ ಭಾವನೆಯಲ್ಲಿ ನಾವಿದ್ದೇವೆ. ಈ ಸಮಯದಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕರು ಯಾರಿಗೇ ಸಮಸ್ಯೆ ಆದ್ರೂ ವಾಣಿಜ್ಯ ಮಂಡಳಿ ಅವರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಲಿದೆ ಎಂದು ಗುಬ್ಬಿ ಜೈರಾಜ್ ಹೇಳಿದರು.