ಕರ್ನಾಟಕ

karnataka

ETV Bharat / sitara

'ಜಿಯೋ ಫಸ್ಟ್ ಡೇ ಫಸ್ಟ್ ಶೋ' ಆಫರ್​​ನಿಂದ ನಿರ್ಮಾಪಕರಿಗೆ ತೊಂದರೆಯಾಗದಿದ್ದರೆ ಸಾಕು: ಗುಬ್ಬಿ ಜೈರಾಜ್​​ - ರಿಲಾಯನ್ಸ್ ಸಂಸ್ಥೆ

ಜಿಯೋ ಹೊಸ ಆಫರ್ ಬಗ್ಗೆ ಇತ್ತೀಚಿಗೆ ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದರು. ಈ 'ಜಿಯೋ ಫಸ್ಟ್ ಡೇ ಫಸ್ಟ್ ಶೋ' ಆಫರ್ ಬಗ್ಗೆ ಪ್ರತಿಕ್ರಿಯಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್​​​​​ ಈ ಆಫರ್​​​​ನಿಂದ ನಿರ್ಮಾಪಕರಿಗೆ ಹಾಗೂ ಥಿಯೇಟರ್ ಮಾಲೀಕರಿಗೆ ತೊಂದರೆಯಾಗದಿದ್ದರೆ ಸಾಕು ಎಂದಿದ್ದಾರೆ.

ಗುಬ್ಬಿ ಜೈರಾಜ್​​

By

Published : Aug 14, 2019, 9:55 PM IST

ಬೆಂಗಳೂರು: 'ಜಿಯೋ ಫಸ್ಟ್ ಡೇ ಫಸ್ಟ್ ಶೋ' ಆಫರ್ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಲಭ್ಯವಿಲ್ಲ. ಆದರೆ ಈ ಯೋಜನೆಯಿಂದ ನಿರ್ಮಾಪಕರಿಗೆ ಅನುಕೂಲ ಆದರೆ ಇದಕ್ಕೆ ನನ್ನ ವಿರೋಧ ಇಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಹೇಳಿದ್ದಾರೆ.

ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್​​​​​

2020 ರ ವೇಳೆಗೆ ಥಿಯೇಟರ್​​ನಲ್ಲಿ ಬಿಡುಗಡೆಯಾಗುವ ಹೊಸ ಸಿನಿಮಾಗಳನ್ನು ಮೊದಲ ದಿನವೇ ಮನೆಯಲ್ಲಿ ಕುಳಿತು ನೋಡಬಹುದು ಎಂದು ಜಿಯೋ ಗಿಗಾ ಫೈಬರ್​​ ವಿಶೇಷ ಆಫರ್ ಕುರಿತು ಮೊನ್ನೆ ಮುಖೇಶ್ ಅಂಬಾನಿ ಹೇಳಿದ್ದರು.

ಈ ಬಗ್ಗೆ ಫಿಲ್ಮ್​ ಚೇಂಬರ್ ಅಧ್ಯಕ್ಷ ಜೈರಾಜ್ ಪ್ರತಿಕ್ರಿಯಿಸಿದ್ದಾರೆ. ಚಿತ್ರಮಂದಿರಗಳಿಂದಲೇ ಚಲನಚಿತ್ರ ಉಳಿದಿರೋದು. ಸಿಂಗಲ್ ಸ್ಕ್ರೀನ್ ಆಗಲೀ ಮಲ್ಟಿ ಸ್ಕ್ರೀನ್ ಆಗಲಿ ಚಿತ್ರಮಂದಿರಗಳು ಉಳಿಯಬೇಕು. 'ಫರ್ಸ್ಟ್ ಡೇ ಫರ್ಸ್ಟ್ ಶೋ ಆಫರ್' ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿಯನ್ನು ರಿಲಯನ್ಸ್ ಸಂಸ್ಥೆಯು ಹೊರಹಾಕಿಲ್ಲ. ಸದ್ಯಕ್ಕೆ ಯಾರಿಗೂ ತೊಂದರೆ ಅಗುವುದಿಲ್ಲ ಎಂದುಕೊಂಡಿದ್ದೇವೆ. ಪೂರ್ಣ ಮಾಹಿತಿ ಬಂದ ಬಳಿಕ ಈ ಆಫರ್​​​ನಿಂದ ಅನಾನುಕೂಲವೋ ಅನುಕೂಲವೋ ತಿಳಿದು ಬರುತ್ತದೆ ಎಂದು ಜೈರಾಜ್ ಹೇಳಿದ್ದಾರೆ.

ABOUT THE AUTHOR

...view details