ಹೈದರಾಬಾದ್ :ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಟಾಲಿವುಡ್ ನಟ ನರ್ಸಿಂಗ್ ಯಾದವ್ ಹೈದರಾಬಾದ್ನ ಸೋಮಾಜಿಗೂಡದಲ್ಲಿರುವ ಯಶೋಧಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ನರ್ಸಿಂಗ್ ಯಾದವ್ ಅವರಿಗೆ 52 ವರ್ಷ ವಯಸ್ಸಾಗಿದ್ದು, ಮೂತ್ರಪಿಂಡ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸುಮಾರು ತೆಲುಗು, ತಮಿಳು, ಹಿಂದಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ವಿಜಯ್ ನಿರ್ಮಲಾ ನಿರ್ದೇಶನದ 'ಹೇಮ ಹೇಮೀಲು' ಅವರ ಮೊದಲ ಚಿತ್ರವಾಗಿದ್ದು, ರಾಮಗೋಪಾಲ್ ವರ್ಮಾ ಚಿತ್ರಗಳಲ್ಲಿ ನಟಿಸ, ಮುನ್ನೆಲೆಗೆ ಬಂದರು.