ನಿನ್ನೆ ಚಕ್ರವರ್ತಿ ಹಾಗೂ ದಿವ್ಯಾ ಉರುಡುಗ ಅವರೊಂದಿಗೆ ಜಗಳ ಮಾಡಿಕೊಂಡಿದ್ದ ಪ್ರಶಾಂತ್ ಸಂಬರಗಿ ಇಂದು ಗೆಳೆಯ ಎಂದು ಕರೆದುಕೊಳ್ಳುತ್ತಿದ್ದ ಕೆ.ಪಿ.ಅರವಿಂದ್ ಜೊತೆಗೆ ವಾಗ್ಯುದ್ಧ ನಡೆಸಿದ್ದಾರೆ.
ಶುಕ್ರವಾರದ ಎಪಿಸೋಡ್ನಲ್ಲಿ ದಿವ್ಯ ಉರುಡುಗ ಅವರ ಕ್ಯಾಪ್ಟನ್ಸಿ ಅವಧಿ ಮುಗಿದಿದೆ ಎಂದು ಬಿಗ್ ಬಾಸ್ ಹೇಳುತ್ತಾರೆ. ಆ ಸಂದರ್ಭದಲ್ಲಿ, ಪ್ರಶಾಂತ್ ಅವರು, ಇಲ್ಲಿ ಮೋಸ ನಡೆದಿದೆ ಎಂದು ಅರವಿಂದ್ ಅವರನ್ನು ಗುರಿಯಾಗಿಸಿಕೊಂಡು ಹೇಳುತ್ತಾರೆ. ಆಗ ಅರವಿಂದ್, ನೀವು ಮಾಡಿರುವುದು ಮೋಸ. ಗೆಳೆಯ ಎಂದು ಮಾತನಾಡುತ್ತಾರೆ ಆದರೆ, ಹಿಂದೆ ಈ ರೀತಿ ಮಾತನಾಡುತ್ತಾರೆ ಎಂದು ಸಹ ಸ್ಪರ್ಧಿಗಳೊಂದಿಗೆ ಹೇಳಿಕೊಳ್ಳುತ್ತಾರೆ.
ಆಗ ಪ್ರಶಾಂತ್ ನಿನಗೆ ಉರಿಯುತ್ತಿದೆಯಾ, ತಾಕತ್ ಇರಬೇಕು ಎಂದು ಮತ್ತಷ್ಟು ಜೋರಾಗಿ ಮಾತನಾಡುತ್ತಾರೆ. 'ತಾಕತ್ತನ್ನೆಲ್ಲಾ ಟಾಸ್ಕ್ ನಲ್ಲಿ ಇಟ್ಟುಕೊಳ್ಳಿ, ಎಲ್ಲರ ಹಣೆಬರಹ ಗೊತ್ತು ಎಂದು ಅರವಿಂದ್ ಹೇಳಿದಾಗ, ಗಂಡಸುತನ ಇರಬೇಕು.. ಕೆಪಿ ಬಾರೋ ಮುಟ್ಟು... ಎಂದು ಪ್ರಶಾಂತ್ ಮುಂದಾಗುತ್ತಾರೆ.