ಜನವರಿ 8 ರಂದು ಯಶ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾದ ಕೆಜಿಎಫ್-2 ಟೀಸರ್ ಭಾರತೀಯ ಚಿತ್ರರಂಗದ ಇತರ ಸಿನಿಮಾಗಳ ದಾಖಲೆಯನ್ನು ಮುರಿದಿರುವುದು ತಿಳಿದ ವಿಚಾರ. ಟೀಸರ್ ನೋಡಿದವರು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅದರಂತೆ ಇಂದು ಸಂಜೆ ಕೆಜಿಎಫ್-2 ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗುವುದು.
ಪ್ರಶಾಂತ್ ನೀಲ್ ಟ್ವೀಟ್ ನೋಡಿ ಥ್ರಿಲ್ ಆದ ಅಭಿಮಾನಿಗಳು...ಟ್ವೀಟ್ನಲ್ಲಿ ಅಂಥದ್ದೇನಿದೆ...? - Yash starring KGF 2
ಇಂದು ಸಂಜೆ 6.32ಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್-2 ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಟ್ವಿಟ್ಟರ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಶಾಂತ್ ನೀಲ್, "ನಿಮಗೆ ನೀಡಲಾದ ಭರವಸೆಯನ್ನು ಉಳಿಸಿಕೊಳ್ಳುತ್ತೇವೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ಕಪಿಲ್ ಶರ್ಮಾ ಶೋ' ತಾತ್ಕಾಲಿಕವಾಗಿ ಸ್ಥಗಿತ: ಕಾರಣ ಇಲ್ಲಿದೆ ಓದಿ
'ಕೆಜಿಎಫ್-2' ನಿರ್ದೇಶಕ ಪ್ರಶಾಂತ್ ನೀಲ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಟ್ವೀಟ್ ಮಾಡಿದ್ದು "ಇಂದು ಸಂಜೆ 6.32 ಕ್ಕೆ ಕೆಜಿಎಫ್-2 ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ. ಕೆಜಿಎಫ್-2 ದೃಶ್ಯದ ಫೋಟೋವೊಂದನ್ನು ಹಂಚಿಕೊಂಡಿರುವ ಪ್ರಶಾಂತ್ ನೀಲ್ "ಇಂದು ಸಂಜೆ 6.32ಕ್ಕೆ ಮೊದಲೇ ಹೇಳಿದ ಮಾತನ್ನು ಉಳಿಸಿಕೊಳ್ಳುತ್ತೇವೆ" ಎಂದು ಬರೆದುಕೊಂಡಿದ್ದಾರೆ. ಯಶ್, ನಿರ್ಮಾಪಕ ವಿಜಯ್ ಕಿರಗಂದೂರ್, ಹೊಂಬಾಳೆ ಫಿಲ್ಮ್ಸ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್, ಸಂಗೀತ ನಿರ್ದೇಶಕ ರವಿ ಬಸ್ರೂರ್, ಕ್ಯಾಮರಾಮನ್ ಭುವನ್ ಗೌಡ, ತೆಲುಗಿನ ವರಾಹಿ ಸಿನಿಮಾ ಹಾಗೂ ಇನ್ನಿತರರಿಗೆ ಈ ಪೋಸ್ಟ್ ಟ್ಯಾಗ್ ಮಾಡಿದ್ದಾರೆ. ಈಗಾಗಲೇ ಕೆಜಿಎಫ್-2 ಸಿನಿಮಾ ವಿತರಣೆ ಹಕ್ಕುಗಳು ಆಯಾ ಭಾಷೆಗಳಿಗೆ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಈಗ ಪ್ರಶಾಂತ್ ನೀಲ್ ಟ್ವೀಟ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದು ಸಿನಿಮಾ ಬಿಡುಗಡೆ ದಿನಾಂಕವನ್ನು ತಿಳಿದುಕೊಳ್ಳಲು ಎದುರು ನೋಡುತ್ತಿದ್ದಾರೆ.