ಕೆಲವು ನಟ ನಟಿಯರಿಗೆ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಇರುವ ಡಿಮ್ಯಾಂಡ್ ನಂತರ ಇರುವುದಿಲ್ಲ. ಕೆಲವೇ ಕೆಲವು ನಟ-ನಟಿಯರು ಮಾತ್ರ ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದ ಇಲ್ಲಿಯವರೆಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಅಂತವರಲ್ಲಿ ಸ್ವೀಟಿ ಅಲಿಯಾಸ್ ಅನುಷ್ಕಾ ಶೆಟ್ಟಿ ಕೂಡಾ ಒಬ್ಬರು.
ಶಾಕುಂತಲೆಯಾಗಿ ಅನುಷ್ಕಾ ಬೇಕೇ ಬೇಕು...ನಿರ್ದೇಶಕನಿಗೆ ಅಭಿಮಾನಿಗಳ ಒತ್ತಾಯ - Anushka with Vijay devarakonda
ನಿರ್ದೇಶಕ ಗುಣಶೇಖರ್ ತಮ್ಮ ಹೊಸ ಸಿನಿಮಾ 'ಶಾಕುಂತಲಂ' ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು ಚಿತ್ರಕ್ಕೆ ಅನುಷ್ಕಾ ಅವರನ್ನು ನಾಯಕಿಯನ್ನಾಗಿ ಕರೆತನ್ನಿ ಎಂದು ಅನುಷ್ಕಾ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ಅನುಷ್ಕಾ ಶೆಟ್ಟಿ ಅಭಿನಯದ 'ನಿಶ್ಯಬ್ಧಂ' ಚಿತ್ರಕ್ಕೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯ್ ದೇವರಕೊಂಡ ಜೊತೆ ಅನುಷ್ಕಾ ನಟಿಸಬಹುದು ಎನ್ನಲಾಗುತ್ತಿದೆ. ಈ ನಡುವೆ ನಿರ್ದೇಶಕ ಗುಣಶೇಖರ್ ಅನೌನ್ಸ್ ಮಾಡಿರುವ ಚಿತ್ರವೊಂದಕ್ಕೆ ಅನುಷ್ಕಾ ಅವರನ್ನೇ ನಾಯಕಿಯನ್ನಾಗಿ ಮಾಡಿ ಎಂದು ಅಭಿಮಾನಿಗಳು ನಿರ್ದೇಶಕನನ್ನು ಒತ್ತಾಯಿಸಿದ್ದಾರೆ.
ಬಹಳ ದಿನಗಳ ನಂತರ ಮತ್ತೆ ನಿರ್ದೇಶನಕ್ಕೆ ಬಂದಿರುವ ಗುಣಶೇಖರ್ 'ಶಾಕುಂತಲಂ' ಎಂಬ ಚಿತ್ರವನ್ನು ಅನೌನ್ಸ್ ಮಾಡಿದ್ದು ಶುಕ್ರವಾರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದರು. ಇದನ್ನು ನೋಡಿದ ಬಹಳಷ್ಟು ಅಭಿಮಾನಿಗಳು ಈ ಪಾತ್ರಕ್ಕೆ ಅನುಷ್ಕಾ ಅವರೇ ಬಹಳ ಚೆನ್ನಾಗಿ ಹೊಂದುತ್ತಾರೆ. ಈ ಪ್ರೇಮಕಥೆಗೆ ಅನುಷ್ಕಾ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿ ಎಂದು ಸೋಷಿಯಲ್ ಮೀಡಿಯಾ ಮುಖಾಂತರ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳ ಆಸೆಯಂತೆ ಈ ಚಿತ್ರದಲ್ಲಿ ಅನುಷ್ಕಾ ನಟಿಸಲಿದ್ದಾರಾ ಅಥವಾ ಬೇರೆ ನಟಿ ಬರಲಿದ್ದಾರಾ ಎಂಬುದನ್ನು ಕಾದು ನೋಡಬೇಕು.