ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಜೇಮ್ಸ್ ಚಲನಚಿತ್ರದ ಟೀಸರ್ ಈಗಾಗಲೇ ಬಿಡುಗಡೆಗೊಂಡಿದೆ. ಟೀಸರ್ ಕಂಡು ಅಪ್ಪು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಕೊಪ್ಪಳದಲ್ಲಿಯೂ ಜೇಮ್ಸ್ ಚಲನಚಿತ್ರದ ಟೀಸರ್ನ್ನು ಬಿಗ್ ಸ್ಕ್ರೀನ್ನಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ರೆಸ್ಟೋರೆಂಟ್ನಲ್ಲಿ ಅಪ್ಪು ಅಭಿಮಾನಿಗಳಿಂದ ಜೇಮ್ಸ್ ಟೀಸರ್ ಸಂಭ್ರಮ - ಪುನೀತ್ ರಾಜ್ ಕುಮಾರ್ ಜೇಮ್ಸ್ ಸಿನೆಮಾ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಜೆಂಟಲ್ ಮ್ಯಾನ್ ರೆಸ್ಟೋರೆಂಟ್ನಲ್ಲಿ ಯುವಕರು ಪ್ರೊಜೆಕ್ಟರ್ ಮೂಲಕ ಜೇಮ್ಸ್ ಟೀಸರ್ ಹಾಕಿ ತಮ್ಮ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅಪ್ಪು ಅಭಿನಯದ ಬಹುನಿರೀಕ್ಷಿತ ಜೇಮ್ಸ್ ಸಿನಿಮಾದ ಟೀಸರ್ ಈಗಾಗಲೇ ಸದ್ದು ಮಾಡುತ್ತಿದೆ.
ರೆಸ್ಟೋರೆಂಟ್ನಲ್ಲಿ ಅಪ್ಪು ಅಭಿಮಾನಿಗಳಿಂದ ಜೇಮ್ಸ್ ಟೀಸರ್ ಸಂಭ್ರಮ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಜೆಂಟಲ್ ಮ್ಯಾನ್ ರೆಸ್ಟೋರೆಂಟ್ನಲ್ಲಿ ಯುವಕರು ಪ್ರೊಜೆಕ್ಟರ್ ಮೂಲಕ ಜೇಮ್ಸ್ ಟೀಸರ್ ಹಾಕಿ ಸಂಭ್ರಮಿಸಿದ್ದಾರೆ. ಸ್ಕ್ರೀನ್ ಮೇಲೆ ಅಪ್ಪುಗೆ ಪೂಜೆ ಸಲ್ಲಿಸಿ ಜೇಮ್ಸ್ ಟೀಸರ್ನ್ನು ಸ್ವಾಗತ ಮಾಡಿದ್ದಾರೆ. ಜೊತೆಗೆ ಅಪ್ಪು.. ಅಪ್ಪು... ಎಂದು ಕೂಗಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ತೆರೆ ಮೇಲೆ ಅಪ್ಪುವನ್ನು ಕಂಡ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಓದಿ :'ದ ಫೇಮ್ ಗೇಮ್'ನಲ್ಲಿ ಮಾಧುರಿ ದೀಕ್ಷಿತ್: ಮೊದಲ ಬಾರಿಗೆ ಒಟಿಟಿ ಸಿರೀಸ್ನಲ್ಲಿ ಕಾಣಿಸಿಕೊಳ್ಳಲು ಇದೇ ಕಾರಣ..
Last Updated : Feb 12, 2022, 11:20 AM IST