ಹೈದರಾಬಾದ್: ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ಸಮಂತಾ ಅಕ್ಕಿನೇನಿ ಹಾಗೂ ನಟ ನಾಗ ಚೈತನ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಾಲ್ಕು ವರ್ಷಗಳು ಕಳೆದಿದ್ದು, ಸುಖ ಜೀವನ ನಡೆಸುತ್ತಿದ್ದಾರೆ. ಆದರೆ, ಕೆಲ ಸಮಯದಿಂದ ಪತಿ - ಪತ್ನಿಯ ನಡುವೆ ಬಿರುಕು ಮೂಡಿದ್ದು, ಡಿವೋರ್ಸ್ ನೀಡಲಿದ್ದಾರೆ ಎಂಬ ಊಹಾಪೋಹಾಗಳು ಹರಿದಾಡುತ್ತಿದೆ. ಇದರ ಬಗ್ಗೆ ಕೇಳಿದ ವರದಿಗಾರನ ಪ್ರಶ್ನೆಗೆ ಸ್ಯಾಮ್ ಸಿಟ್ಟಾಗಿದ್ದು, ವಿಡಿಯೋ ವೈರಲ್ ಆಗಿದೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸಮಂತಾ ತೆರಳಿದ್ದ ವೇಳೆ ವರದಿಗಾರನೊಬ್ಬ "ನೀವು ಹಾಗೂ ನಾಗ ಚೈತನ್ಯ ದೂರಾಗುವ ಕುರಿತು ವದಂತಿ ಹರಡುತ್ತಿದೆ. ಇದರ ಬಗ್ಗೆ ನೀವೇನಂತೀರಾ" ಎಂದು ಕೇಳಿದ್ದಾನೆ. ಇದಕ್ಕೆ ಸಮಂತಾ, ತೆಲುಗಿನಲ್ಲಿ "ಗುಡಿಕಿ ವಚ್ಚಾನು. ಬುದ್ಧಿ ಉಂದಾ?" (ದೇವಸ್ಥಾನಕ್ಕೆ ಬಂದಿದೀನಿ. ಬುದ್ಧಿ ಇದೆಯಾ) ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ಯಾಮ್ ಅಭಿಮಾನಿಗಳು ಹಂಚಿಕೊಂಡಿದ್ದು, ನಟಿಯ ಉತ್ತರಕ್ಕೆ ಅವರನ್ನು ಶ್ಲಾಘಿಸಿದ್ದು, ಮಾಧ್ಯಮದವರ ನಡವಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ,