ಸೆಪ್ಟೆಂಬರ್ 18 ಅಭಿನಯ ಭಾರ್ಗವ, ಸಾಹಸಸಿಂಹ. ಡಾ. ವಿಷ್ಣುವರ್ಧನ್ ಅವರ 70 ನೇ ವರ್ಷದ ಹುಟ್ಟುಹಬ್ಬ. ಈ ಬಾರಿಯ ವಿಷ್ಣು ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಡಾ. ವಿಷ್ಣು ಸೇನಾ ಸಮಿತಿ ಪ್ಲ್ಯಾನ್ ಮಾಡಿದೆ.
ಈ ಬಾರಿಯ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲಿರುವ ಡಾ.ವಿಷ್ಣು ಸೇನಾ ಸಮಿತಿ
ಈ ಬಾರಿ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ವಿಷ್ಣು ಅಭಿಮಾನಿಗಳು ನಿರ್ಧರಿಸಿದ್ದಾರೆ. ಜೊತೆಗೆ ಡಾ. ವಿಷ್ಣುವರ್ಧನ್ ಅವರಿಗೆ ಪದ್ಮವಿಭೂಷಣ ನೀಡಲು ಕೇಂದ್ರ ಸರ್ಕಾರವನ್ನು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ವಿಷ್ಣು ಅಭಿಮಾನಿಗಳು ಒಂದು ಅಭಿಯಾನ ಆರಂಭಿಸಿದ್ದು ಡಾ. ವಿಷ್ಣುವರ್ಧನ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದೆ. ಜೊತೆಗೆ ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಸಮಯ ಮುಗಿದರೂ ಫೈನ್ ಕಟ್ಟಲು ಹಣ ಇಲ್ಲದ 10 ಖೈದಿಗಳಿಗೆ ಹಣ ಸಹಾಯ ಮಾಡಿ ಅವರಿಗೆ ಹೊಸ ಜೀವನ ರೂಪಿಸಿಕೊಳ್ಳುವಂತೆ ಮಾಡಲಿದ್ದಾರೆ. 1-10ನೇ ತರಗತಿ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಲು ಕೂಡಾ ಯೋಜಿಸಲಾಗಿದೆ. ಇಷ್ಟು ಮಾತ್ರವಲ್ಲದೆ, ಡಾ.ವಿಷ್ಣು ಸಿನಿಮಾಗಳ ಬಗ್ಗೆ ಕಿರುಚಿತ್ರ ಸ್ಪರ್ಧೆ ಆಯೋಜಿಸಿ ಮೊದಲ ಬಹುಮಾನವಾಗಿ 20 ಸಾವಿರ, ಎರಡನೇ ಬಹುಮಾನ 15,000 ಮತ್ತು ಮೂರನೇ ಬಹುಮಾನ ಆಗಿ 10,000 ಪಡೆಯಬಹುದು. ಆಸಕ್ತರು 9972219267 ನಂಬರಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಡಾ. ವಿಷ್ಣು ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಗೆ ರಕ್ತದಾನ ಮಾಡುವಂತೆ ಕರೆ ನೀಡಲಾಗಿದೆ. ಇದರ ಜೊತೆಗೆ ಸೆಪ್ಟೆಂಬರ್ 18 ರಿಂದ ಸುಮಾರು 70,000 ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಹುಶ: ಈ ಯೋಜನೆ ಮುಂದಿನ ಸೆಪ್ಟೆಂಬರ್ನಲ್ಲಿ ಮುಗಿಯಲಿದೆ.