ಹೈದರಾಬಾದ್:ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಶುಕ್ರವಾರ 44 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಅವರ ಅಭಿಮಾನಿಗಳು ಗುರುವಾರವೇ ಟ್ವಿಟರ್ನಲ್ಲಿ ವಿಶ್ ಮಾಡುತ್ತಿದ್ದು, ಟ್ವಿಟರ್ನಲ್ಲಿ ಈಗ ಭಾರತದ ನಂಬರ್ ಒನ್ ಟ್ರೆಂಡ್ ಆಗಿದೆ.
ಒಂದು ದಿನ ಮೊದಲೇ ಟ್ರೆಂಡ್ ಆಯ್ತು ಸೂಪರ್ ಸ್ಟಾರ್ ಬರ್ತಡೇ... ವಿಶ್ ಮಾಡಿದ್ದು ಎಷ್ಟು ಲಕ್ಷ ಮಂದಿ ಗೊತ್ತಾ? - ಕಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜನುಮದಿನ
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಶುಕ್ರವಾರ 44 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಅವರ ಅಭಿಮಾನಿಗಳು ಗುರುವಾರವೇ ಟ್ವಿಟರ್ನಲ್ಲಿ ವಿಶ್ ಮಾಡುತ್ತಿದ್ದು, ಟ್ವಿಟರ್ನಲ್ಲಿ ಈಗ ಭಾರತದ ನಂಬರ್ ಒನ್ ಟ್ರೆಂಡ್ ಆಗಿದೆ.

Mahesh babu
ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಮಹೇಶ್ ಬಾಬು ಬರ್ತಡೇ ಆಗಸ್ಟ್ 9ಕ್ಕೆ ಇದ್ದರೂ ಟ್ವಿಟರ್ನಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮಂದಿ 8 ನೇ ತಾರೀಖಿನಿಂದಲೇ ಶುಭಾಶಯ ಕೋರಲು ಶುರು ಮಾಡಿದ್ದಾರೆ.
ಮಹೇಶ್ ಬಾಬು ತೆಲುಗು ನಟ ಸೂಪರ್ ಸ್ಟಾರ್ ಕೃಷ್ಣ ಹಾಗೂ ಇಂದಿರಾ ದೇವಿ ದಂಪತಿಗಳಿಗೆ ಆಗಸ್ಟ್ 9 1975 ರಂದು ಚೆನ್ನೈನಲ್ಲಿ ಜನಿಸಿದ್ದರು. ನಾಲ್ಕನೇ ವಯಸ್ಸಿಗೆ ಬಾಲನಟನಾಗಿ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟ ಮಹೇಶ್ ಬಾಬು 1999ರಲ್ಲಿ ರಾಜಕುಮಾರುಡು ಸಿನಿಮಾ ಮೂಲಕ ನಾಯಕನಟನಾಗಿ ಅಭಿನಯ ಶುರು ಮಾಡಿದರು. ಮಹೇಶ್ ಬಾಬು 25 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
Last Updated : Aug 8, 2019, 11:53 PM IST