ಕರ್ನಾಟಕ

karnataka

By

Published : Jun 11, 2019, 2:09 AM IST

ETV Bharat / sitara

'ಐ ಲವ್ ಯೂ' ಚಿತ್ರಕ್ಕಾಗಿ ಅಭಿಮಾನಿಗಳ ಅಬ್ಬರ: ತಲೆ ಎತ್ತಿದೆ ಉಪ್ಪಿಯ ಬೃಹತ್ ಕಟೌಟ್

ಸ್ಯಾಂಡಲ್ ವುಡ್​​​​​ನ‌ ಸೂಪರ್ ಸ್ಟಾರ್ 'ಉಪೇಂದ್ರ' ಹಾಗೂ ಡಿಂಪಲ್ ಕ್ವೀನ್ 'ರಚಿತರಾಮ್' ಅಭಿನಯದ ಆರ್ ಚಂದ್ರು ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಐ ಲವ್ ​ಯೂ'. ಇನ್ನೂ ಈ ಚಿತ್ರದ ಬಿಡುಗಡೆಗೆ ಇನ್ನೂ ನಾಲ್ಕು ದಿನಗಳು ಬಾಕಿ ಇರುವಾಗಲೇ ಕೆಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ಉಪ್ಪಿ ಫ್ಯಾನ್ಸ್​​​​ನ‌ ಅಬ್ಬರ ಶುರುವಾಗಿದೆ.

ಉಪೇಂದ್ರ' ಹಾಗೂ ಡಿಂಪಲ್ ಕ್ವೀನ್ 'ರಚಿತರಾಮ್'

ಹೌದು ಕೆಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರಲ್ಲಿ 'ಐ ಲವ್ ಯೂ' ಚಿತ್ರ ಇದೇ ವಾರ ರಿಲೀಸ್ ಆಗ್ತಿದ್ದು, ಚಿತ್ರಮಂದಿರದ ಮುಂದೆ ಉಪ್ಪಿಯ ಬೃಹತ್ ಕಟೌಟ್ ತಲೆ ಎತ್ತಿದೆ.‌ ಚಿತ್ರದ ಬಿಡುಗಡೆಗೆ ಇನ್ನೂ ನಾಲ್ಕು ದಿನ ಇರುವಾಗಲೇ ಥಿಯೇಟರ್ ಬಳಿ ಉಪ್ಪಿ ಅಭಿಮಾನಿಗಳು ಕಟೌಟ್ ನಿಲ್ಲಿಸಿ, ಥಿಯೇಟರ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಬ್ರಹ್ಮ ಚಿತ್ರದ ನಂತರ ಉಪ್ಪಿ ಮತ್ತು ಆರ್.ಚಂದ್ರು ಮತ್ತೆ ಒಟ್ಟಿಗೆ ಬರ್ತಿದ್ದು, ಚಿತ್ರದ ಮೇಲೆ ಅಭಿಮಾನಿಗಳ ಕ್ರೇಜ್ ಸಖತ್ ಜೋರಾಗಿದೆ.

'ಐ ಲವ್ ಯೂ' ಚಿತ್ರಕ್ಕಾಗಿ ಅಭಿಮಾನಿಗಳ ಅಬ್ಬರ

'ಐ ಲವ್ ಯೂ' ಚಿತ್ರದ ಹಾಡುಗಳು ಈಗಾಗಲೇ ಸಿನಿಪ್ರಿಯರ ಬಾಯಲ್ಲಿ ಗುನುಗುತಿದ್ದು. ಉಪ್ಪಿ ಮತ್ತೆ ಈ ಚಿತ್ರದ ಮೂಲಕ ಒಂದೊಳ್ಳೆ ಬ್ರೇಕ್ ಸಿಗುವ ಭರವಸೆಯಲ್ಲಿದ್ದಾರೆ. ಇನ್ನೂ ಉಪ್ಪಿಯ ಈ ಪ್ರೇಮ ಕಾವ್ಯವನ್ನು ಅವರ ಭಕ್ತಗಣ ಯಾವರೀತಿ ಅಪ್ಪಿಕೊಳ್ತಾರೆ ಅನ್ನೋದು ಕಾದು ನೋಡಬೇಕಿದೆ.

For All Latest Updates

TAGGED:

ABOUT THE AUTHOR

...view details