1995ರಲ್ಲಿ ಬಿಡುಗಡೆಯಾದ 'ಹುಲಿಯಾ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಖಳನಟ ಶರತ್ ಲೋಹಿತಾಶ್ವ ಇಂದಿಗೂ ತಮ್ಮ ಖದರ್ ಉಳಿಸಿಕೊಂಡಿದ್ದಾರೆ. ಸದ್ಯಕ್ಕೆ, ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಶರತ್ ಲೋಹಿತಾಶ್ವ ಬಹು ಬೇಡಿಕೆಯ ಖಳನಟ ಎನ್ನಬಹುದು.
ಶರತ್ ಲೋಹಿತಾಶ್ವ ಹೊಸ ಲುಕ್ಗೆ ನಿರ್ದೇಶಕರು ಫಿದಾ, ಸಾಲ್ಟ್ & ಪೆಪ್ಪರ್ ಲುಕ್‌ನಲ್ಲಿ ಖಳನಟ
ಸಾಮಾನ್ಯವಾಗಿ ಎಲ್ಲಾ ಸಿನಿಮಾಗಳಲ್ಲೂ ಕಪ್ಪು ತಲೆಕೂದಲು, ದಪ್ಪ ಮೀಸೆ ಬಿಡುತ್ತಿದ್ದ ಶರತ್ ಲೋಹಿತಾಶ್ವ ವಿಶಿಷ್ಟ ಲುಕ್ ಈಗ ಬದಲಾಗಿದೆ. ಇನ್ನು ಮುಂದಿನ ಬಹುತೇಕ ಸಿನಿಮಾಗಳಲ್ಲಿ ಶರತ್ ಅವರನ್ನು ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್‌ನಲ್ಲಿ ಅಭಿಮಾನಿಗಳು ನೋಡಬಹುದು.
ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶರತ್ ಲೋಹಿತಾಶ್ವ ಖಳನಟನಾಗಿ ನಟಿಸಿದ್ದಾರೆ. ಇತ್ತೀಚೆಗೆ ಶರತ್ ಅವರ ಶೈಲಿ ಬದಲಾಗಿದ್ದು ಇದೀಗ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣುತ್ತಿದ್ದಾರೆ. ಸಹಜವಾಗಿ ಶರತ್ ಅವರನ್ನು ಸಿನಿಮಾಗಳಲ್ಲಿ ಕಪ್ಪು ಬಣ್ಣದ ಕೂದಲು, ಉದ್ದವಾದ ಮೀಸೆಗಳಲ್ಲಿ ನೋಡಿರುತ್ತೇವೆ. ಆದರೆ 'ಉಡುಂಬ' ಚಿತ್ರದ ಪ್ರೆಸ್ಮೀಟ್ಗೆ ಬಂದಿದ್ದ ಅವರನ್ನು ಕಂಡುಹಿಡಿಯಲು ಎಲ್ಲರಿಗೂ ಕಷ್ಟ ಎನಿಸಿತು. ಏಕೆಂದರೆ ಅವರು ತಮ್ಮ ಒರಿಜಿನಲ್ ಗೆಟಪ್ನಲ್ಲಿದ್ದರು.
ಶರತ್ ಅವರ ಈ ಗೆಟಪ್ ಒಂದು ರೀತಿ ಹೊಸತನದಿಂದ ಕೂಡಿತ್ತು. ಸಿನಿಮಾಗಳಿಗಾಗಿ ಪ್ರತಿದಿನ ಶೇವ್ ಮಾಡೋದು, ತಲೆ ಕೂದಲಿಗೆ ಬಣ್ಣ ಹಾಕೋದೇ ಒಂದು ಕೆಲಸ ಆಗಿತ್ತಂತೆ. ಆದರೆ 15 ದಿನಗಳು ಶೂಟಿಂಗ್ನಿಂದ ಬಿಡುವು ಇದ್ದಾಗ ಕೂದಲಿಗೆ ಬಣ್ಣ ಹಚ್ಚದೆ ಹಾಗೇ ಬಿಟ್ಟಿದ್ದಾರೆ. ಇದೀಗ ಅವರ ರಿಯಲ್ ಲುಕ್ ನೋಡಿ ಕೆಲವು ನಿರ್ದೇಶಕರು ಫಿದಾ ಆಗಿದ್ದಾರಂತೆ. ಹೀಗಾಗಿ ಈ ಲುಕ್ನಲ್ಲೇ ನನಗೆ ನಾಲ್ಕು ಸಿನಿಮಾಗಳಲ್ಲಿ ಆಫರ್ ಸಿಕ್ಕಿದೆ ಎನ್ನುತ್ತಾರೆ ಶರತ್. ಮುಂದೆ ಬರುವ ಸಿನಿಮಾಗಳಲ್ಲಿ ಶರತ್ ಅವರನ್ನು ಸಾಲ್ಟ್, ಪೆಪ್ಪರ್ ಲುಕ್‌ನಲ್ಲಿ ನೀವು ನೋಡಬಹುದು.