ಕರ್ನಾಟಕ

karnataka

ETV Bharat / sitara

ಯುವರತ್ನ ಚಿತ್ರದ ಪೋಸ್ಟರ್​​ಗೆ ಅಭಿಮಾನಿಗಳ ಪೂಜೆ..! - Fan worship for Yuvaratna's film poster

ಯುವರತ್ನ ಚಿತ್ರದ ಪೋಸ್ಟರ್​​ಗೆ ಅಭಿಮಾನಿಗಳು ಪೂಜೆ ಸಲ್ಲಿಸುತ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹವಾ ಕ್ರಿಯೇಟ್ ಮಾಡ್ತಿದೆ‌.

Fan worship for Yuvaratna's film poster
ಯುವರತ್ನ ಚಿತ್ರದ ಪೋಸ್ಟರ್​​ಗೆ ಅಭಿಮಾನಿಗಳ ಪೂಜೆ

By

Published : Aug 1, 2020, 8:45 PM IST

ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಚಿತ್ರದ ಪೋಸ್ಟರ್, ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿತ್ತು. ಇನ್ನು ಅಪ್ಪು ಹೊಸ ಲುಕ್​ಗೆ ಅಭಿಮಾನಿಗಳು ಪ್ರೀತಿಯ ಅಪ್ಪುಗೆ ನೀಡಿದ್ದಾರೆ. ಅಲ್ಲದೆ ಯುವರತ್ನ ಪೋಸ್ಟರ್ ಹೊಸ ಟ್ರೆಂಡ್ ಸೆಟ್ ಮಾಡಿದ್ದು, 'ರಾಜಕುಮಾರ'ನ ಅಭಿಮಾನಿಗಳಲ್ಲಿ ಸಖತ್ ಎನರ್ಜಿ ತಂದಿದೆ.

ತುಂಬಾ ದಿನಗಳ ನಂತರ 'ಯುವರತ್ನ'ನ ದರ್ಶನ ಮಾಡಿದ್ದಕ್ಕೆ ಅಭಿಮಾನಿ ದೇವರುಗಳಲ್ಲಿ, ಹಬ್ಬದ ವಾತಾವರಣ ಮನೆ ಮಾಡಿದ್ದು, ಚಿತ್ರದ ನ್ಯೂ ಪೋಸ್ಟರ್​​ನ್ನು ಭಜರಂಗಿ ಸನ್ನಿಧಾನದಲ್ಲಿಟ್ಟು ಪೂಜೆ ಸಲ್ಲಿಸಿದ್ದಾರೆ.

ಯುವರತ್ನ ಚಿತ್ರದ ಪೋಸ್ಟರ್​​ಗೆ ಅಭಿಮಾನಿಗಳ ಪೂಜೆ

ಸದ್ಯ ಯುವರತ್ನ ಚಿತ್ರದ ಪೋಸ್ಟರ್​​ಗೆ ಅಭಿಮಾನಿಗಳು ಪೂಜೆ ಸಲ್ಲಿಸುತ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹವಾ ಕ್ರಿಯೆಟ್ ಮಾಡ್ತಿದೆ‌.

ರಾಜಕುಮಾರ ಸಿನಿಮಾದ ನಂತರ ನಿರ್ದೇಶಕ ಸಂತೋಷ್ ಆನಂದ್​​ರಾಮ್, ಅಪ್ಪು ಚಿತ್ರಕ್ಕೆ ಮತ್ತೆ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರಕ್ಕೆ ಮತ್ತಷ್ಟು ಬೂಸ್ಟ್ ಸಿಕ್ಕಿದೆ.

For All Latest Updates

TAGGED:

ABOUT THE AUTHOR

...view details