ಚೆನ್ನೈ: ಸೂಪರ್‌ಸ್ಟಾರ್ ರಜಿನಿಕಾಂತ್ ಅವರು ರಾಜಕೀಯಕ್ಕೆ ಪದಾರ್ಪಣೆ ಮಾಡುವುದಿಲ್ಲ ಎಂದು ಡಿಸೆಂಬರ್ 28 ರಂದು ಘೋಷಿಸಿದ್ದು, ಹೆಚ್ಚಿನವರು ನಿರಾಸೆಗೊಂಡಿದ್ದಾರೆ. ಇದೀಗ ಅವರ ಅಭಿಮಾನಿಯೋರ್ವ, ರಜಿನಿಕಾಂತ್ ಅವರು ರಾಜಕೀಯಕ್ಕೆ ಬರಬೇಕೆಂದು ಒತ್ತಾಯಿಸಿ ಸ್ವತಃ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ್ದರು. ಹಾಗೆಯೇ ರಾಜಕೀಯಕ್ಕೆ ಪ್ರವೇಶಿಸದೇ ಜನರ ಸೇವೆಯನ್ನು ಮುಂದುವರೆಸುವುದಾಗಿ ಘೋಷಿಸಿದ್ದರು. ಈ ಘೋಷಣೆಯಿಂದ ಅವರ ಅಭಿಮಾನಿಗಳು ಸೇರಿದಂತೆ ಹೆಚ್ಚಿನವರಿಗೆ ಆಘಾತವನ್ನುಂಟು ಮಾಡಿದೆ. ಅನಾರೋಗ್ಯ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದು, ಜನರು ರಜಿನಿಕಾಂತ್ ಅವರಿಗೆ ಸಹಕಾರ ನೀಡಿದ್ದಾರೆ. ಇನ್ನೂ ಹಲವರು ರಾಜಕೀಯಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್: ಅಘಾತಕ್ಕೊಳಗಾಗಿ ಸಾವಿಗೀಡಾದ ಅಭಿಮಾನಿ