ಕರಾಟೆ ಕಿಂಗ್ ಶಂಕರ್ ನಾಗ್ ಅಭಿಮಾನಿಯ ಅಭಿಮಾನದ ಕಥೆಯುಳ್ಳ ಸದಭಿರುಚಿಯ ಚಿತ್ರ ಫ್ಯಾನ್ ಕಳೆದವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಯಾಗಿ ಸಿನಿ ರಸಿಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದು, ನಿನ್ನೆ ಫ್ಯಾನ್ ಚಿತ್ರತಂಡ ಚಿತ್ರದ ಸಕ್ಸಸ್ ಹಂಚಿಕೊಳ್ಳಲು ಮಾಧ್ಯಮಗಳ ಮುಂದೆ ಹಾಜರಾಗಿದ್ದರು.
ಸಂತ್ರಸ್ತರ ನೆರವಿಗೆ ಬರುವವರಿಗೆ ಉಚಿತ ಟಿಕೆಟ್; ಇದು ಫ್ಯಾನ್ ಮೆಗಾ ಪ್ಲಾನ್ !!! - ಮಲ್ಟಿಫ್ಲೆಕ್ಸ್
ಫ್ಯಾನ್ ಚಿತ್ರತಂಡ ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರಕರ್ನಾಟಕದ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಸಂತ್ರಸ್ತರಿಗೆ ಫ್ಯಾನ್ ಚಿತ್ರತಂಡ ನೆರವು ನೀಡಲು ಮುಂದಾಗಿದೆ. ಅಲ್ಲದೆ ಇದರ ಜೊತೆಗೆ ಉತ್ತರ ಕರ್ನಾಟಕದ ಶಾಲಾ ಮಕ್ಕಳಿಗೆ ಪುಸ್ತಕ ಪೆನ್ ಬ್ಯಾಗ್ ಗಳನ್ನು ನೆರವು ನೀಡುವವರಿಗೆ ಫ್ಯಾನ್ ಚಿತ್ರ ನೋಡಲು ಉಚಿತ ಟಿಕೆಟ್ ಕೊಡಲು ಚಿತ್ರತಂಡ ಮುಂದಾಗಿದೆ.
ಆರಂಭದಿಂದಲೂ ಹೇಳಿದಂತೆ ನಮ್ಮ ಫ್ಯಾನ್ ಚಿತ್ರವು ಸದಭಿರುಚಿಯ ಚಿತ್ರವಾಗಿದ್ದು ಬಿಡುಗಡೆಯಾಗಿದ್ದ ಎಲ್ಲಾ ಕೇಂದ್ರಗಳಲ್ಲೂ ಜನರ ಮೆಚ್ಚುಗೆ ಪಡೆದು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಅಲ್ಲದೆ ಸದ್ಯ ನಮ್ಮ ಚಿತ್ರಕ್ಕೆ ಮಂಗಳೂರು ಕಾರವಾರ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಜೊತೆಗೆ ಕೆಲವು ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರದ ಕಲೆಕ್ಷನ್ ಈಗೀಗ ಇಂಪ್ರೂ ಆಗುತ್ತಿದೆ. ಹೊಸಬರ ತಂಡವೊಂದು ಒಂದು ಹೊಸ ಪ್ರಯತ್ನದೊಂದಿಗೆ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಈಗ ನಮ್ಮ ಚಿತ್ರಕ್ಕೆ ಕನ್ನಡಿಗರ ಪ್ರೋತ್ಸಾಹ ಬೇಕು, ದಯವಿಟ್ಟು ನಮ್ಮ ಚಿತ್ರವನ್ನು ನೋಡಿ ಹರಸಿ ಎಂದು ಚಿತ್ರತಂಡ ಮಾಧ್ಯಮಗಳ ಮೂಲಕ ಸಿನಿ ಪ್ರಿಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದರ ಜೊತೆಗೆ ಫ್ಯಾನ್ ಚಿತ್ರತಂಡ ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರಕರ್ನಾಟಕದ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಸಂತ್ರಸ್ತರಿಗೆ ಫ್ಯಾನ್ ಚಿತ್ರತಂಡ ನೆರವು ನೀಡಲು ಮುಂದಾಗಿದೆ. ಅಲ್ಲದೆ ಇದರ ಜೊತೆಗೆ ಉತ್ತರ ಕರ್ನಾಟಕದ ಶಾಲಾ ಮಕ್ಕಳಿಗೆ ಪುಸ್ತಕ ಪೆನ್ ಬ್ಯಾಗ್ ಗಳನ್ನು ನೆರವು ನೀಡುವವರಿಗೆ ಫ್ಯಾನ್ ಚಿತ್ರ ನೋಡಲು ಉಚಿತ ಟಿಕೆಟ್ ಕೊಡಲು ಮುಂದಾಗಿದೆ. ಬಿಡುಗಡೆ ದಿನ ಶಂಕರ್ ನಾಗ್ ಅವರ ಮೇಲಿನ ಅಭಿಮಾನದಿಂದ ಆಟೋ ಚಾಲಕರಿಗೆ ಉಚಿತ ಟಿಕೆಟ್ ನೀಡಿದ ಫ್ಯಾನ್ ಚಿತ್ರತಂಡ ಈಗ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಸ್ಪಂದಿಸಲು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಫ್ಯಾನ್ ಚಿತ್ರತಂಡದ ಈ ಪ್ರಯತ್ನ ಯಶಸ್ವಿಯಾಗಲಿ ಎಂದು ನಾವು ಕೂಡ ಹಾರೈಸೋಣ..