ಕರ್ನಾಟಕ

karnataka

ETV Bharat / sitara

ಸಮಂತಾ ಜಿಮ್ಗೆ ಹೋಗೋದು ಫಿಟ್​​ನೆಸ್​ಗಾಗಿ ಅಲ್ವಂತೆ.. ಹಾಗಾದ್ರೆ? - ಸಮಂತಾ ಅಕ್ಕಿನೇನಿ ಸುದ್ದಿ

ನಾನು ಇತ್ತೀಚೆಗೆ ಈ ಟ್ರೋಲಿಗರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾನು ಎಷ್ಟು ಬಳೆದಿದ್ದೇನೆ ಎಂಬುದನ್ನು ಈ ಟ್ರೋಲಿಗರಿಂದ ತಿಳಿಯುತ್ತದೆ..

ಸಮಂತಾ ಜಿಮ್ಗೆ ಹೋಗೋದು ಫಿಟ್​​ನೆಸ್​ಗಾಗಿ ಅಲ್ವಂತೆ.. ಹಾಗಾದ್ರೆ?
ಸಮಂತಾ ಜಿಮ್ಗೆ ಹೋಗೋದು ಫಿಟ್​​ನೆಸ್​ಗಾಗಿ ಅಲ್ವಂತೆ.. ಹಾಗಾದ್ರೆ?

By

Published : Jan 27, 2021, 4:26 PM IST

ತೆಲುಗು ಸಿನಿ ರಂಗದಲ್ಲಿ ಕ್ಯೂಟ್​​ ಕಪಲ್​ಗಳನ್ನು ಹೇಳುತ್ತಾ ಹೋದ್ರೆ ಅದ್ರಲ್ಲಿ ಮೊದ ಸಾಲಿಗೆ ಬಂದು ನಿಲ್ಲುವವರು ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ಅಕ್ಕಿನೇನಿ. ಈ ಇಬ್ಬರು ಆಗಾಗ ತಮ್ಮ ತರ್ಲೆ ಮತ್ತು ತುಂಟಾಟಗಳಿಂದ ನೆಟ್ಟಿಗರ ಗಮನ ಸೆಳೆಯುತ್ತಾರೆ.

ಸಮಂತಾ-ನಾಗ ಚೈತನ್ಯ

ಇಂದು ನಟಿ ಸಮಂತಾ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಶಿಬಿರ ಆಯೋಜಿಸಿದ್ದು, ಫ್ಯಾನ್ಸ್​​ ಕೇಳಿದ ಪ್ರಶ್ನೆಗಳಿಗೆ ನಟಿ ಉತ್ತರಿಸಿದ್ದಾರೆ. ಒಬ್ಬ ಅಭಿಮಾನಿ ಸಮಂತಾಗೆ, "ನೀವು ಜಿಮ್​​ಗೆ ಏಕೆ ಹೋಗ್ತೀರಿ ಎಂದು ಕೇಳಿದ್ದಕ್ಕೆ ನಟಿಯು ಕುತೂಹಲಕಾರಿ ಉತ್ತರ ನೀಡಿದ್ದಾರೆ. ಮುಂದೆ ಓದಿ..

ಸಮಂತಾ-ನಾಗ ಚೈತನ್ಯ

ಪ್ರಶ್ನೆಗೆ ಉತ್ತರಿಸಿದ ನಟಿ, "ನಾನು ಜಿಮ್​​ಗೆ ಫಿಟ್​​ನೆಸ್​​ಗಾಗಿ ಹೋಗೋದಿಲ್ಲ. ಆದ್ರೆ, ನಾಗ ಚೈತನ್ಯ ಜಿಮ್​​ಗೆ ಹೋಗ್ತಿದ್ದು, ಅವರು ದಿನಾಲು ಜಿಮ್​​ಗೆ ಹೋಗ್ತಾರಾ ಅಥವಾ ಇಲ್ವಾ ಎಂದು ಪರೀಕ್ಷೆ ಮಾಡಲು ನಾನು ಜಿಮ್​ ಸೇರಿಕೊಂಡೆ" ಎಂದು ಹೇಳಿದ್ದಾರೆ.

ಮತ್ತೊಬ್ಬ ಅಭಿಮಾನಿ, "ಮೇಡಂ ನಿಮ್ಮ ಬಗ್ಗೆ ಟ್ರೋಲ್​ ಮಾಡ್ತಾರಲ್ಲ ಅದರ ಬಗ್ಗೆ ಮಾತನಾಡಿ" ಎಂದಾಗ ಉತ್ತರಿಸಿದ ನಟಿ, "ನಾನು ಇತ್ತೀಚೆಗೆ ಈ ಟ್ರೋಲಿಗರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾನು ಎಷ್ಟು ಬಳೆದಿದ್ದೇನೆ ಎಂಬುದನ್ನು ಈ ಟ್ರೋಲಿಗರಿಂದ ತಿಳಿಯುತ್ತದೆ ಎಂದು ಸಮಂತಾ ಹೇಳಿದ್ದಾರೆ.

ABOUT THE AUTHOR

...view details