ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಖ್ಯಾತ ತೆಲುಗು ಹಾಸ್ಯನಟ ವೇಣು ಮಾಧವ್ ಕೊನೆಯುಸಿರೆಳೆದಿದ್ದಾರೆ. ವೇಣು ಕಿಡ್ನಿ ಸಮಸ್ಯೆಯಿಂದ ಕೂಡಾ ಬಳಲುತ್ತಿದ್ದು ಸಿಕಂದ್ರಾಬಾದ್ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಖ್ಯಾತ ತೆಲುಗು ಹಾಸ್ಯನಟ ವೇಣು ಮಾಧವ್ ವಿಧಿವಶ - ಪವನ್ ಕಲ್ಯಾಣ್
ಟಾಲಿವುಡ್ನಲ್ಲಿ ಅತ್ಯಧಿಕ ಬೇಡಿಕೆ ಇರುವ ಹಾಸ್ಯನಟರಲ್ಲಿ ವೇಣು ಮಾಧವ್ ಕೂಡಾ ಒಬ್ಬರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವೇಣು ಸಿಕಂದ್ರಾಬಾದ್ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
ವೇಣು ಮಾಧವ್
ವೆಂಟಿಲೇಟರ್ ಸಹಾಯದಿಂದ ವೇಣು ಮಾಧವ್ಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು.
ಮಿಮಿಕ್ರಿ ಕಲಾವಿದನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ವೇಣು ಮಾಧವ್ ಎಸ್.ವಿ. ಕೃಷ್ಣಾರೆಡ್ಡಿ ನಿರ್ದೇಶನದ 'ಸಂಪ್ರದಾಯಂ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದರು. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ವೇಣುಗೆ ಬ್ರೇಕ್ ಕೊಟ್ಟಿದ್ದು ಪವನ್ ಕಲ್ಯಾಣ್ ಅಭಿನಯದ 'ತೊಲಿಪ್ರೇಮ' ಸಿನಿಮಾ. ಅಲ್ಲಿಂದ ವೇಣು ಹಿಂದಿರುಗಿ ನೋಡಲಿಲ್ಲ. ಸಾಕಷ್ಟು ಅವಕಾಶಗಳು ಅವರನ್ನು ಹುಡುಕಿ ಬಂದವು. ಟಾಲಿವುಡ್ನಲ್ಲಿ ಅತ್ಯಧಿಕ ಬೇಡಿಕೆ ಇರುವ ಹಾಸ್ಯನಟರಲ್ಲಿ ವೇಣು ಮಾಧವ್ ಕೂಡಾ ಒಬ್ಬರು.
Last Updated : Sep 25, 2019, 12:51 PM IST