ಕರ್ನಾಟಕ

karnataka

ETV Bharat / sitara

ಸಂಕ್ರಾಂತಿ ಸಂಭ್ರಮ...ಕಿರುತೆರೆಯಲ್ಲಿ ಹಿಟ್ ಸಿನಿಮಾಗಳ ಸುಗ್ಗಿ - ಕಿರುತೆರೆಯಲ್ಲಿ ಖ್ಯಾತ ಸಿನಿಮಾಗಳ ಪ್ರಸಾರ

ಇತ್ತೀಚೆಗೆ ತೆರೆಕಂಡ ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ನಟನೆಯ ಬ್ಲಾಕ್​ ಬಸ್ಟರ್ ಸಿನಿಮಾ 'ಬ್ರಹ್ಮಚಾರಿ' ಕೂಡಾ ಪ್ರಸಾರವಾಗಲಿದೆ. ಉದಯ ಟಿವಿಯಲ್ಲಿ ಈ ಸಿನಿಮಾ ಪ್ರಸಾರವಾಗುತ್ತಿದೆ. ನೀವು ಮನೆಯಲ್ಲೇ ಕುಳಿತು ಈ ಕಾಮಿಡಿ ಸಿನಿಮಾವನ್ನು ಎಂಜಾಯ್ ಮಾಡಬಹುದು.

bramhachari
ಅದಿತಿ ಪ್ರಭುದೇವ, ನೀನಾಸಂ ಸತೀಶ್

By

Published : Jan 10, 2020, 9:59 PM IST

ಹಿರಿತೆರೆಯಲ್ಲಿ ತೆರೆಕಂಡಿರುವ ಜನಪ್ರಿಯ ಸಿನಿಮಾಗಳು ಕಿರಿತೆರೆಯಲ್ಲಿ ಪ್ರಸಾರವಾಗುವುದು ಮಾಮೂಲು ಸಂಗತಿ. ಸಂಕ್ರಾಂತಿ ಸಡಗರಕ್ಕಾಗಿ ಇದೇ ಭಾನುವಾರ ಜೀ ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್​' ಸಿನಿಮಾ ಪ್ರಸಾರವಾಗುತ್ತಿರುವುದು ಕಿರುತೆರೆಪ್ರಿಯರ ಸಂತೋಷಕ್ಕೆ ಕಾರಣವಾಗಿದೆ.

ಇನ್ನು ಭಾನುವಾರವೇ ಇತ್ತೀಚೆಗೆ ತೆರೆಕಂಡ ನೀನಾಸಂ ಸತೀಶ್ ಹಾಗೂ ಅದಿತಿ ಪ್ರಭುದೇವ ನಟನೆಯ ಬ್ಲಾಕ್​ ಬಸ್ಟರ್ ಸಿನಿಮಾ 'ಬ್ರಹ್ಮಚಾರಿ' ಕೂಡಾ ಪ್ರಸಾರವಾಗಲಿದೆ. ಉದಯ ಟಿವಿಯಲ್ಲಿ ಈ ಸಿನಿಮಾ ಪ್ರಸಾರವಾಗುತ್ತಿದೆ. ನೀವು ಮನೆಯಲ್ಲೇ ಕುಳಿತು ಈ ಕಾಮಿಡಿ ಸಿನಿಮಾವನ್ನು ಎಂಜಾಯ್ ಮಾಡಬಹುದು. ಚಿತ್ರದಲ್ಲಿ ರಾಮ ಭಕ್ತ ರಾಮು ಆಗಿ ನೀನಾಸಂ ಸತೀಶ್ ಅಭಿನಯಿಸಿದ್ದರೆ, ಬರಹಗಾರ್ತಿ ಸುನೀತ ಕೃಷ್ಣಸ್ವಾಮಿ ಪಾತ್ರಕ್ಕೆ ಅದಿತಿ ಪ್ರಭುದೇವ ಬಣ್ಣ ಹಚ್ಚಿದ್ದಾರೆ. ಅವರಿಬ್ಬರೂ ಪರಿಚಯವಾಗುವುದು ಹೇಗೆ, ಮದುವೆಯಾಗುವುದು ಹೇಗೆ, ಅವರ ಮುಂದಿನ ಜೀವನ ಯಾವ ರೀತಿಯಲ್ಲಿ ಹೋಗುತ್ತದೆ ಎಂಬುದನ್ನು ತಿಳಿಯಬೇಕಾದರೆ ಬ್ರಹ್ಮಚಾರಿ ಸಿನಿಮಾ ನೋಡಲೇ ಬೇಕು. ಕಳೆದ ವರ್ಷ ನವೆಂಬರ್​​​​​​ನಲ್ಲಿ ಬಿಡುಗಡೆಯಾದ 'ಬ್ರಹ್ಮಚಾರಿ' ಸಿನಿಮಾವನ್ನು ಚಂದ್ರ ಮೋಹನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನೀನಾಸಂ ಸತೀಶ್, ಅದಿತಿ ಪ್ರಭುದೇವ, ಅಚ್ಯುತ್ ಕುಮಾರ್, ಶಿವರಾಜ್​ ಕೆ.ಆರ್. ಪೇಟೆ, ಹಿರಿಯ ನಟ ದತ್ತಾತ್ರೇಯ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

ABOUT THE AUTHOR

...view details