ಸ್ಯಾಂಡಲ್ವುಡ್ನಲ್ಲಿ ಸದ್ಯಕ್ಕೆ ಸ್ಟಾರ್ ನಟರ ಮಕ್ಕಳ ದರ್ಬಾರ್ ಜೋರಾಗಿದೆ. ಈಗಾಗಲೇ ಸ್ಟಾರ್ ಕುಟುಂಬದಿಂದ ಅನೇಕ ಪ್ರತಿಭೆಗಳು ಚಿತ್ರರಂಗಕ್ಕೆ ಬಂದಿದ್ದಾರೆ. ಇದೀಗ 80-90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಹೀರೋ ಆಗಿ ಮಿಂಚಿದ್ದ ಸುಪ್ರೀಮ್ ಹೀರೋ ಶಶಿಕುಮಾರ್ ಪುತ್ರ ಕೂಡಾ ಚಂದನವನಕ್ಕೆ ಬಂದಿದ್ದಾರೆ.
ಶಶಿಕುಮಾರ್ ಪುತ್ರ ಅಕ್ಷಿತ್, 'ಸೀತಾಯಣ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರಭಾಕರ್ ಆರಿಪಾಕರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 'ಸೀತಾಯಣ' ಸಿನಿಮಾ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಗಾಗಲೇ ಚಿತ್ರದ ಪೋಸ್ಟರ್ಗಳು ರಿವೀಲ್ ಆಗಿದ್ದು ಸಿನಿಪ್ರಿಯರಲ್ಲಿ ಅಕ್ಷಿತ್ ಆ್ಯಕ್ಟಿಂಗ್ ನೋಡಬೇಕೆಂಬ ಕುತೂಹಲ ಹೆಚ್ಚಾಗಿದೆ. ಸಿನಿಮಾ ಪಕ್ಕಾ ಲವ್ ಸ್ಟೋರಿ ಆಗಿದ್ದು ಅಕ್ಷಿತ್ ತೆರೆ ಮೇಲೆ ಲವರ್ ಬಾಯ್ ಆಗಿ ಮಿಂಚಲು ರೆಡಿಯಾಗಿದ್ದಾರೆ.