ಬೆಂಗಳೂರು :ಈ ಸಿನಿಮಾ ಎಂಬ ಅದೃಷ್ಟದ ಪ್ರಪಂಚದಲ್ಲಿ ಯಾವ ನಟ, ಯಾವ ನಿರ್ದೇಶಕನಿಗೆ ಅದೃಷ್ಟ ಖುಲಾಯಿಸುತ್ತೆ ಅಂತಾ ಹೇಳೋದಕ್ಕೆ ಆಗೋದಿಲ್ಲ. ಇದೀಗ ಪಿಆರ್ಕೆ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ಫೆ.16ರಂದು ಅಮೆಜಾನ್ ಪ್ರೈಂ ಓಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ನಿರ್ದೇಶಕನಿಗೂ ಇತರೆ ಭಾಷೆಯ ಸಿನಿಮಾದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಮೆಜಾನ್ ಪ್ರೈಂನಲ್ಲಿ ನ್ಯಾಶನಲ್ ಟ್ರೆಂಡಿಂಗ್‌ನಲ್ಲಿ ಚಿತ್ರ ಏಳನೇ ಸ್ಥಾನ ಪಡೆದಿದೆ. ಕನ್ನಡದಲ್ಲಿ ಈವರೆಗೂ ಬೇರೆ ಯಾವ ಸಿನಿಮಾಗಳಿಗೂ ಈ ರೀತಿಯ ಟ್ರೆಂಡಿಂಗ್ ಸಿಕ್ಕಿರಲಿಲ್ಲ.
ಈ ಮೆಚ್ಚುಗೆ ಫ್ಯಾಮಿಲಿ ಪ್ಯಾಕ್ ಸಿನಿಮಾವನ್ನ ನಿರ್ದೇಶನ ಮಾಡಿರೋ ನಿರ್ದೇಶಕ ಅರ್ಜುನ್ ಕುಮಾರ್ ಅವಕಾಶ ಸುರಿಮಳೆ ಆಗುತ್ತಿದೆ. ಕೇವಲ ಕನ್ನಡಿಗರು ಮಾತ್ರವಲ್ಲ, ಸೌತ್ ಸಿನಿ ಇಂಡಸ್ಟ್ರಿಯ ಹಲವು ದಿಗ್ಗಜರಿಂದಲೂ ಒಳ್ಳೇ ಪ್ರತಿಕ್ರಿಯೆ ಸಿಕ್ಕಿದೆ.
ನಾಯಕನಾಗಿಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾಕ್ಕೆ ತಮಿಳಿನ ರಜನಿಕಾಂತ್ ಅವರ ಪಿಆರ್ಒ ಆಗಿರುವ ರಿಯಾಜ್ ಕೆ ಅಹ್ಮದ್ ಅವರು ಗುಡ್ ಜಾಬ್ ಅರ್ಜುನ್ ಕುಮಾರ್ ಮತ್ತು ಪಿಆರ್ಕೆ ಸಂಸ್ಥೆ ಆಯ್ಕೆಯೂ ಅಷ್ಟೇ ಚೆನ್ನಾಗಿದೆ ಎನ್ನುವ ಮೂಲಕ ತಂಡದ ಕೆಲಸಕ್ಕೆ ಬೆನ್ನು ತಟ್ಟಿದ್ದಾರೆ.
ಬಾಹುಬಲಿ ಮತ್ತು ಆರ್ಆರ್ಆರ್ ಸಿನಿಮಾ ತಂಡದ ಜತೆ ಗುರುತಿಸಿಕೊಂಡಿರುವ ವಂಶಿ ಕಾಕಾ ಮಜವಾದ ಸ್ಕ್ರಿಪ್ಟ್ ಮತ್ತು ಅದನ್ನು ಹೇಳಿರುವ ರೀತಿಯೂ ಅಷ್ಟೇ ಸರಳವಾಗಿದೆ ಎಂದಿದ್ದಾರೆ. ಸೌತ್ ಸಿನಿ ದುನಿಯಾದ ಇನ್ಫೂಯೆನ್ಸರ್ ರಮೇಶ್ ಬಾಲ ಅವರಿಂದಲೂ ಮೆಚ್ಚುಗೆ ಸಿಕ್ಕಿದೆ. ಅರ್ಜುನ್ ಕುಮಾರ್ ಒಂದೊಳ್ಳೆ ಮನರಂಜನಾತ್ಮಕ ಚಿತ್ರವನ್ನೇ ನೀಡಿದ್ದಾರೆ ಎಂದಿದ್ದಾರೆ.