ಕರ್ನಾಟಕ

karnataka

ETV Bharat / sitara

ಸೋಷಿಯಲ್ ಮೀಡಿಯಾಗೆ ಬಂದ್ರಾ ಅಂಬಿಕಾ...ಈ ಬಗ್ಗೆ ಅವರು ಹೇಳೋದೇನು..? - ಅಂಬಿಕಾ ನಕಲಿ ಫೇಸ್​​ಬುಕ್ ಖಾತೆ

ಹಿರಿಯ ನಟಿ ಅಂಬಿಕಾ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್​​​ಬುಕ್ ಖಾತೆ ತೆಗೆದಿದ್ದು ಈ ಬಗ್ಗೆ ಎಚ್ಚರವಾಗಿರುವಂತೆ ಅಂಬಿಕಾ ತಮ್ಮ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.

Fake social media account by the name Ambika
ಅಂಬಿಕ

By

Published : Jun 4, 2020, 6:20 PM IST

Updated : Jun 4, 2020, 6:29 PM IST

ಸಿನಿಮಾ, ಧಾರಾವಾಹಿ, ಟಿಕ್​​ಟಾಕ್​​ ಸ್ಟಾರ್​​​​​​​​​​​​, ಕ್ರೀಡಾತಾರೆಯರು ಹೀಗೆ ಸೆಲಬ್ರಿಟಿಗಳ ಹೆಸರಿನಲ್ಲಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಅಕೌಂಟ್ ತೆರೆಯುವುದು ಇತ್ತೀಚೆಗೆ ಹೆಚ್ಚಾಗಿ ಹೋಗಿದೆ. ಇದೀಗ ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಅಂಬಿಕಾ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿದೆ.

ಹಿರಿಯ ನಟಿ ಅಂಬಿಕಾ

ಈ ಬಗ್ಗೆ ಅಂಬಿಕಾ ತಮ್ಮ ಸ್ನೇಹಿತರ ಮುಖಾಂತರ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ಫೇಕ್ ಅಕೌಂಟ್ ತೆರೆದಿರುವುದು ಅಂಬಿಕಾ ಅವರಿಗೆ ಶಾಕ್ ಆಗಿದೆ. ಇಂತಹ ವಿಚಾರಗಳನ್ನು ಯಾರೂ ಪ್ರೋತ್ಸಾಹಿಸಬೇಡಿ. ಈ ಫೇಕ್ ಅಕೌಂಟ್​​​​ನಿಂದ ಯಾವುದಾದರೂ ಸಂದೇಶಗಳು ಬಂದರೆ ಕೂಡಲೇ ಸೈಬರ್ ಕ್ರೈಂಗೆ ದೂರು ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅಸಲಿಗೆ ಅಂಬಿಕಾ ಇದುವರೆಗೂ ಯಾವುದೇ ಸೋಷಿಯಲ್ ಮೀಡಿಯಾ ಅಕೌಂಟ್ ತೆರೆದಿಲ್ಲ.

ಅಂಬಿಕಾ ಹೆಸರಿನಲ್ಲಿ ನಕಲಿ ಫೇಸ್​​ಬುಕ್ ಖಾತೆ

ಸಾಮಾನ್ಯವಾಗಿ ಸೆಲಬ್ರಿಟಿಗಳ ಸೋಷಿಯಲ್ ಮೀಡಿಯಾ ಅಕೌಂಟ್​​​​​​​ಗಳನ್ನು ವೆರಿಫೈಯ್ಡ್​​ ಮಾಡಲಾಗಿರುತ್ತದೆ. ಹೆಸರಿನ ಮುಂದೆ ನೀಲಿ ಬಣ್ಣದ ಟಿಕ್ ಮಾರ್ಕ್ ಇರುತ್ತದೆ. ಆದ್ದರಿಂದ ಅಭಿಮಾನಿಗಳು ಈ ಸಂಬಂಧ ಎಚ್ಚರಿಕೆಯಿಂದ ಇರಬೇಕು ಎಂದು ಅಂಬಿಕಾ ಮನವಿ ಮಾಡಿದ್ದಾರೆ.

Last Updated : Jun 4, 2020, 6:29 PM IST

ABOUT THE AUTHOR

...view details