'ದಿ ಟರ್ಮಿನೇಟರ್' ಸಿನಿಮಾ ನೋಡಿರುವವರಿಗೆ ಅರ್ನಾಲ್ಡ್ ಶ್ವಾಜ್ನೆಗರ್ ಪರಿಚಯ ಇರುತ್ತೆ. ಆಸ್ಟ್ರೇಲಿಯಾದ ಪ್ರಜೆಯಾದ ಇವರು ಅದ್ಭುತ ನಟ ಮಾತ್ರವಲ್ಲ, ಉದ್ಯಮಿ, ರಾಜಕಾರಣಿ ಹಾಗೂ ದೇಹದಾರ್ಢ್ಯ ಪಟು ಕೂಡಾ.
ಹಾಲಿವುಡ್ ಸಾಹಸಮಯ ಚಿತ್ರಗಳ ಮೂಲಕ ಅರ್ನಾಲ್ಡ್ ಶ್ವಾಜ್ನೆಗರ್ ಜಗತ್ತಿನಾದ್ಯಂತ ಹೆಸರು ಮಾಡಿದವರು. ಅರ್ನಾಲ್ಡ್ ಇತ್ತೀಚೆಗೆ ಜೊಹಾನ್ಸ್ಬರ್ಗ್ನಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ವೇಳೆ ಅಭಿಮಾನಿಗಳೊಂದಿಗೆ ಮಾತನಾಡುವಾಗ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಅರ್ನಾಲ್ಡ್ಗೆ ಕಾಲಿನಿಂದ ಒದ್ದಿದ್ದಾನೆ. ಹೊಡೆತದ ರಭಸಕ್ಕೆ ಅವರು ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಅಭಿಮಾನಿಗಳು ಆ ದುಷ್ಕರ್ಮಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಅರ್ನಾಲ್ಡ್ 'ಆ ಜನಸಂದಣಿಯಲ್ಲಿ ಯಾರೋ ನೂಕಿದರು ಎಂದುಕೊಂಡಿದ್ದೆ, ಆದರೆ ವಿಡಿಯೋ ನೋಡಿದಾಗಲೇ ನನ್ನ ಮೇಲೆ ದಾಳಿ ನಡೆದಿದ್ದು ತಿಳಿಯಿತು. ಅಭಿಮಾನಿಗಳು ಈ ಬಗ್ಗೆ ಚಿಂತಿಸುವುದು ಬೇಡ. ನಾನು ಆರೋಗ್ಯವಾಗಿದ್ದೇನೆ. ನನಗೇನೂ ಆಗಿಲ್ಲ ಎಂದು ಹೇಳಿದ್ದಾರೆ.