ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ 'ಅಯೋಗ್ಯ' ಸಿನಿಮಾ ಶತದಿನೋತ್ಸವವನ್ನು ಪೂರೈಸಿತ್ತು. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಸಿನಿಮಾ ಹಾಡುಗಳು ಕೂಡಾ ಬಹಳ ಹಿಟ್ ಆಗಿತ್ತು.
'ಅಯೋಗ್ಯ' ಚಿತ್ರಕ್ಕಾಗಿ ನೀಡಿದ್ದ ಹಣ ವಾಪಸ್ ಬಂದಿಲ್ಲ: ಕಾರ್ಯಕಾರಿ ನಿರ್ಮಾಪಕ ಆರೋಪ - undefined
'ಅಯೋಗ್ಯ' ಸಿನಿಮಾಗಾಗಿ ನಾನು ನೀಡಿದ್ದ 10 ಲಕ್ಷ ರೂಪಾಯಿ ಬಂಡವಾಳವನ್ನು ಚಿತ್ರದ ನಿರ್ದೇಶಕ ಇನ್ನೂ ವಾಪಸ್ ನೀಡಿಲ್ಲ ಎಂದು ಚಿತ್ರದಿಂದ ಹೊರ ನಡೆದಿದ್ದ ಕಾರ್ಯಕಾರಿ ನಿರ್ಮಾಪಕ ಮೋಹನ್ ಆರೋಪಿಸಿದ್ದಾರೆ.
ಈ ಸಿನಿಮಾವನ್ನು ಟಿ.ಆರ್. ಚಂದ್ರಶೇಖರ್ ನಿರ್ಮಿಸಿದ್ದಾರೆ. ಆದರೆ, ಈ ಮುನ್ನ ಈ ಚಿತ್ರವನ್ನು ಸುರೇಶ್ ಹಾಗೂ ಮೋಹನ್ ಎಂಬುವವರು ನಿರ್ಮಿಸಬೇಕಿತ್ತು. ಆದರೆ ಚಿತ್ರದ ಬಜೆಟ್ ಹೆಚ್ಚಾಯ್ತು ಎಂಬ ಕಾರಣದಿಂದ ಇಬ್ಬರೂ ಚಿತ್ರನಿರ್ಮಾಣದಿಂದ ಹಿಂದೆ ಸರಿದಿದ್ದರು. ನಂತರ ಈ ಸಿನಿಮಾಗೆ 'ಕ್ರಿಸ್ಟಲ್ ಪಾರ್ಕ್ ಸಿನಿಮಾಸ್' ಸಂಸ್ಥೆಯ ಟಿ.ಆರ್. ಚಂದ್ರಶೇಖರ್ ಬಂಡವಾಳ ಹೂಡಿದ್ದರು. ಆದರೆ, ಚಿತ್ರಕ್ಕಾಗಿ ನಾನು ನೀಡಿದ್ದ 10 ಲಕ್ಷ ರೂಪಾಯಿಯನ್ನು ಚಿತ್ರದ ನಿರ್ದೇಶಕ ಮಹೇಶ್ ಇನ್ನೂ ವಾಪಸ್ ನೀಡಿಲ್ಲ ಎಂದು ಕಾರ್ಯಕಾರಿ ನಿರ್ಮಾಪಕ ಮೋಹನ್ ಆರೋಪಿಸಿ ಚಿತ್ರತಂಡದ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
'ರಾಜರಾಣಿ' ಚಿತ್ರದ ಪ್ರೆಸ್ಮೀಟ್ನಲ್ಲಿ ಮಾತನಾಡಿದ ಮೋಹನ್, ಮೊದಲು 'ಅಯೋಗ್ಯ' ಚಿತ್ರಕ್ಕೆ ಒಂದು ಕೋಟಿ ರೂಪಾಯಿ ಬಜೆಟ್ ಫಿಕ್ಸ್ ಆಗಿತ್ತು. ಆದರೆ ಕ್ರಮೇಣ ನಿರ್ದೇಶಕ ಮಹೇಶ್ ಬಜೆಟನ್ನು ಮೂರು ಕೋಟಿ ರೂಪಾಯಿಗೆ ಹೆಚ್ಚಿಸಿದರು. ನಾನು ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಬೇರೆ ನಿರ್ಮಾಪಕನನ್ನು ಚಿತ್ರಕ್ಕೆ ಕರೆತಂದರು. ಆದರೆ ನಾನು ಹೂಡಿದ್ದ ಹತ್ತು ಲಕ್ಷ ಬಂಡವಾಳ ಇನ್ನೂ ವಾಪಸ್ ಬಂದಿಲ್ಲ ಎಂದು ಆರೋಪಿಸಿದ್ದಾರೆ. ಸಿನಿಮಾ ಪ್ರಮೋಶನ್ ವೇಳೆ ಕೂಡಾ ಚಿತ್ರ ಕೈ ಬಿಟ್ಟ ಎಂದು ನನ್ನನ್ನೇ ಆರೋಪಿಸಿದ್ದಾರೆ. ಆದರೆ ನಾನಾಗಿ ಚಿತ್ರದಿಂದ ಹೊರಹೋಗಿಲ್ಲ. ನಾನೂ ಈಗಲೂ ಮಹೇಶ್ ಜೊತೆ ಚೆನ್ನಾಗಿದ್ದೇನೆ. ನಾವಿಬ್ಬರೂ ಕ್ಲಾಸ್ಮೇಟ್ಸ್, ಈ ಪ್ರೆಸ್ಮೀಟ್ಗೆ ಕೂಡಾ ಅವರನ್ನು ಆಹ್ವಾನಿಸಿದ್ದೆ, ಆದರೆ ಅವರು ಬಂದಿಲ್ಲ ಎಂದು ಮೋಹನ್ ಹೇಳಿದ್ದಾರೆ.