ಕರ್ನಾಟಕ

karnataka

ETV Bharat / sitara

ಎಂಜಿನಿಯರಿಂಗ್ ಓದಿ ಕಲಾವಿದರಾದವರು.. ಬದುಕು ರೂಪಿಸಿದ ಬಣ್ಣದ ಗೀಳು.. - ಕನ್ನಡ ಧಾರಾವಾಹಿ ಸುದ್ದಿ

ಈ ನಟ-ನಟಿಯರು ಮೊದಲು ಇಂಜಿನಿಯರಿಂಗ್​ ವಿದ್ಯಾಭ್ಯಾಸ ಮಾಡಿ ನಂತರ ತಮ್ಮ ನೆಚ್ಚಿನ ಕಲೆಯಾದ ನಟನಾ ವಲಯದ್ಲಲಿ ಬ್ಯುಸಿಯಾಗಿದ್ದಾರೆ. ಇವರಲ್ಲಿ ಕೆಲವರು ಧಾರಾವಾಹಿಯಲ್ಲಿ ನಟಿಸುತ್ತಿದ್ದರೆ, ಮತ್ತೆ ಕೆಲವರು ಸಿನಿಮಾದಲ್ಲಿ ಬ್ಯಸಿಯಾಗಿದ್ದಾರೆ.

ಇವರೆಲ್ಲಾ ಓದಿದ್ದು ಎಂಜಿನಿಯರಿಂಗ್, ಆಗಿದ್ದು ಕಲಾವಿದರು

By

Published : Nov 24, 2019, 6:08 PM IST

ಎಲ್ಲರನ್ನೂ ತನ್ನತ್ತ ಕೈ ಬೀಸಿ ಕರೆಯುವ ಕಲೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬ ಮಾತಿದೆ. ಹಾಗೆ ಆರಿಸಲ್ಪಟ್ಟವರು ಶ್ರದ್ಧೆಯಿಂದ ಕಲೆಯ ಆರಾಧನೆ ಮಾಡಿದರೆ ಅವರಿಗೆ ಕಲಾ ಸರಸ್ವತಿ ಒಲಿಯುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಪ್ರಸಕ್ತ ಉದಾಹರಣೆಯಾಗಿ ಈ ಕಿರುತೆರೆ ನಟ-ನಟಿಯರಿದ್ದಾರೆ.

ಅಂದ ಹಾಗೇ ಇವರೆಲ್ಲಾ ಕಲಿತದ್ದು ಇಂಜಿನಿಯರಿಂಗ್‌. ಇಂಜಿನಿಯರ್ ಪದವಿ ಗಳಿಸಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇವರು ಓದಿದ್ದು ಇಂಜಿನಿಯರಿಂಗ್​​​​ ಆದರೂ ಇದೀಗ ಇವರು ಬೆಳೆಯುತ್ತಿರುವುದು ನಟನಾ ಲೋಕದಲ್ಲಿ!

ಚಂದು

ಬಯಸದೇ ಬಂದಿರುವಂತಹ ಭಾಗ್ಯವನ್ನು ಅಲ್ಲಗಳೆಯದ ಇವರೆಲ್ಲಾ ಇದೀಗ ಬಣ್ಣದ ಲೋಕದಲ್ಲಿ ತಮ್ಮ ಪಯಣ ಮುಂದುವರಿಸುತ್ತಿದ್ದಾರೆ. ಕಮಲಿ ಧಾರಾವಾಹಿಯ ನಿಂಗಿಯಾಗಿ ಅಭಿನಯಿಸುತ್ತಿರುವ ಅಂಕಿತಾ ಎಂ ಎನ್ ಅಯ್ಯರ್ ಇಂಜಿನಿಯರ್ ಪದವೀಧರೆ. ಒಂದು ವರ್ಷ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡಿರುವ ಇವರು ಇದೀಗ ನಟನೆಯಲ್ಲಿ ಬ್ಯುಸಿ.

ಸೀತಾವಲ್ಲಭ ಧಾರಾವಾಹಿಯ ಬ್ಯೂಟಿಫುಲ್ ವಿಲನ್ ಅಂಕಿತಾ ಪಾತ್ರಕ್ಕೆ ಜೀವ ತುಂಬುತ್ತಿರುವ ಚಂದನಾ ಕೂಡಾ ಇಂಜಿನಿಯರಿಂಗ್​​ ಕಲಿತಿದ್ದಾರೆ. ಮನೆದೇವ್ರು ಧಾರಾವಾಹಿಯಲ್ಲಿ ನಾಯಕ ಸೂರ್ಯನಾಗಿ ನಟಿಸಿ ಮನ ಸೆಳೆದಿದ್ದ ಕಾರವಾರ ಕುವರ ಜಯ್ ಡಿಸೋಜಾ ಇಂಜಿನಿಯರಿಂಗ್ ಕಲಿತಿದ್ದರು ಮುಖ ಮಾಡಿದ್ದು ಮಾಡೆಲಿಂಗ್​​ನತ್ತ. ಇದೀಗ ತೆಲುಗು ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ.

ದೀಪ

ಹರಹರ ಮಹಾದೇವ ಧಾರಾವಾಹಿಯಲ್ಲಿ ಪಾರ್ವತಿಯಾಗಿ ಗಮನ ಸೆಳೆದಿರುವ ಗುಲ್ಬರ್ಗಾದ ಚೆಂದುಳ್ಳಿ ಚೆಲುವೆ ಪ್ರಿಯಾಂಕಾ ಚಿಂಚೋಳಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದು ಸದ್ಯ ನಟನಾ ಲೋಕದಲ್ಲಿ ಮಿಂಚುತ್ತಿದ್ದಾರೆ.

ರಶ್ಮಿತಾ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎರಡು ಕನಸು ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿರುವ ಶಿಲ್ಪಾ ಶೆಟ್ಟಿ ಕೂಡಾ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ‌. ತುಳು ಚಿತ್ರ ಗಿರ್ ಗಿಟ್ಲೆಯಲ್ಲಿ ಅಭಿನಯಿಸಿರುವ ಶಿಲ್ಪಾ ಸದ್ಯ ರಮೇಶ್ ಅರವಿಂದ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಳಿ ಹೆಂಡ್ತಿ ಧಾರಾವಾಹಿಯಲ್ಲಿ ನಾಯಕನ ತಂಗಿ ತುಳಸಿಯಾಗಿ ಮನ ಸೆಳೆದಿರುವ ದೀಪಿಕಾ ಕೂಡಾ ಇಂಜಿನಿಯರಿಂಗ್ ಕಲಿತಿದ್ದಾರೆ.

ಪ್ರಿಯಾಂಕ
ತುಳಸಿ
ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದನ್ ಪಾತ್ರದಾರಿ ಚಂದು ಗೌಡ ಅವರು ಕೂಡಾ ಇಂಜಿನಿಯರಿಂಗ್ ಕಲಿತಿದ್ದಾರೆ. ಇದೀಗ ಚಂದು ಅವರು ಕಿರುತೆರೆಯ ಜೊತೆಗೆ ರಾಬರ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಅಂಕಿತ

ಗಟ್ಟಿಮೇಳ ಧಾರಾವಾಹಿಯಲ್ಲಿ ವಿಲನ್ ಸಾರಿಕಾ ಆಗಿ ಅಭಿನಯಿಸುತ್ತಿರುವ ಕೊಡಗಿನ ಬೆಡಗಿ ರಶ್ಮಿತಾ ಚಂಗಪ್ಪ ಕೂಡಾ ಸಿವಿಲ್ ಇಂಜಿನಿಯರ್ ಪದವೀಧರರು. ಮಿಥುನ ರಾಶಿ ಧಾರಾವಾಹಿಯಲ್ಲಿ ನಾಯಕನ ತಂಗಿ ಭಾವನಳಾಗಿ ಮಿಂಚಿದ ದೀಪ ಮತ್ತು ನಾಯಕ ಮಿಥುನ್ಆ​​​​ಗಿ ಮನೆ ಮಾತಾಗಿರುವ ಸ್ವಾಮಿನಾಥನ್ ಕೂಡಾ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿರುವ ಇವರೆಲ್ಲಾ ಸದ್ಯ ತಮ್ಮ ನೆಚ್ಚಿನ ನಟನಾ ಲೋಕದಲ್ಲಿ ಬ್ಯುಸಿಯಾಗಿದ್ದಾರೆ.

ನಿಂಗಿ(ಕಮಲಿ)

ABOUT THE AUTHOR

...view details