ಕರ್ನಾಟಕ

karnataka

ETV Bharat / sitara

ನಾನ್​ ಕೋವಿಡ್​ ರೋಗಿಗಳಿಗೆ ತುರ್ತು ಚಿಕಿತ್ಸೆ ಸಿಗದ್ದಕ್ಕೆ ನಟಿ ಬೇಸರ... ಸಚಿವರು ಹೇಳಿದ್ದೇನು? - ಕಿರುತೆರೆ ನಟಿ ಶ್ವೇತಾ ಪ್ರಸಾದ್

ಲಾಕ್​​ಡೌನ್​​ ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ಸಿಗುತ್ತಿಲ್ಲ ಎಂದು ಕಿರುತೆರೆ ನಟಿ ಶ್ವೇತಾ ಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ.

emergency treatment not available in hospital
ಲಾಕ್ ಡೌನ್ ಎಫೆಕ್ಟ್ : ತುರ್ತು ಪರಿಸ್ಥಿತಿಯಲ್ಲೂ ಸಿಗ್ತಿಲ್ಲ ಚಿಕಿತ್ಸೆ, ನಟಿ ಅಳಲು

By

Published : Apr 22, 2020, 1:07 PM IST

ಬೆಂಗಳೂರು: ಲಾಕ್​ಡೌನ್​ ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡದೆ ನಿರಾಕರಣೆ ಮಾಡುತ್ತಿದ್ದಾರೆ ಎಂದು ಕಿರುತೆರೆ ನಟಿ ಶ್ವೇತಾ ಪ್ರಸಾದ್ ಆರೋಪಿಸಿದ್ದಾರೆ.

ನೋವೆಲ್ ಕೊರೊನಾ ವೈರಸ್ ಹರಡುವಿಕೆ ಹೆಚ್ಚಾದ ಹಿನ್ನೆಲೆ ಲಾಕ್ ಡೌನ್​​ ವಿಸ್ತರಣೆಯಾಗಿದೆ. ಇದರ ಎಫೆಕ್ಟ್​​ನಿಂದಾಗಿ ಜನರಿಗೆ ಹೊರಗೆ ಬರದಂತೆ ಆದೇಶಿಸಲಾಗಿದೆ. ಈ ನಡುವೆ ದಿಢೀರ್ ಅಂತ ಬರುವ ಅನಾರೋಗ್ಯ ಸಮಸ್ಯೆಯಿಂದಾಗಿ ಚಿಕಿತ್ಸೆಗಾಗಿ ಯಾವ ಆಸ್ಪತ್ರೆಗೆ ಹೋಗಬೇಕು, ಬಿಡಬೇಕು ಅನ್ನೋ ಗೊಂದಲ ಸಹ ಸೃಷ್ಟಿಯಾಗಿದೆ.

ಲಾಕ್ ಡೌನ್ ಎಫೆಕ್ಟ್ : ತುರ್ತು ಪರಿಸ್ಥಿತಿಯಲ್ಲೂ ಸಿಗ್ತಿಲ್ಲ ಚಿಕಿತ್ಸೆ, ನಟಿ ಅಳಲು

‌ಯಾಕೆಂದರೆ ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಹೋದರೂ ಜನರಿಗೆ ಬರುತ್ತಿರುವ ಉತ್ತರ, ಸದ್ಯಕ್ಕೆ ಇಲ್ಲಿ ಯಾವ ರೋಗಿಗಳಿಗೂ ಟ್ರೀಟ್​ಮೆಂಟ್ ಕೊಡುತ್ತಿಲ್ಲ. ಬೇರೆ ಆಸ್ಪತ್ರೆಗೆ ಹೋಗಿ ಅನ್ನೋ ಉತ್ತರವೇ ಬರ್ತಿದೆ.‌ ಹೀಗಾಗಿ ಈ ಸಮಯದಲ್ಲಿ ಯಾವ ಆಸ್ಪತ್ರೆಗೆ ಹೋಗಬೇಕು? ರೋಗಿಗೆ ಏನ್ ಆಗಿದೆ ಎಂಬುದನ್ನ ನೋಡೋಕೆ ನಿರಾಕರಣೆ ಮಾಡುತ್ತಿದ್ದಾರೆ ಅಂತ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

ರಾಧರಮಣ ಸಿರಿಯಲ್ ಖ್ಯಾತಿಯ ರಾಧ ಅಲಿಯಾನ್ ಶ್ವೇತಾ ಪ್ರಸಾದ್, ಅವರ ಪರಿಚಯಸ್ಥರ ತಾಯಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು. ‌ಈ ಸಮಯದಲ್ಲಿ ಆಂಬ್ಯುಲೆನ್ಸ್​​​ನಲ್ಲೇ ಚಿಕಿತ್ಸೆಗಾಗಿ ಎರಡು ಗಂಟೆಗಳ ಕಾಲ ಓಡಾಡಿದ್ದಾರೆ.

ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಕೊರೊನಾದಿಂದಾಗಿ ಹಲವೆಡೆ ನಾನ್​ ಕೋವಿಡ್​​ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ, ನಾನ್ ಕೋವಿಡ್ ಆಸ್ಪತ್ರೆಗಳ ಪಟ್ಟಿ ಪ್ರಕಟಿಸುತ್ತೇವೆ ಅಂತ ತಿಳಿಸಿದರು. ಇನ್ನು ಖಾಸಗಿ ಆಸ್ಪತ್ರೆಗಳ ಸಂಘದ ಪದಾಧಿಕಾರಿಗಳೊಂದಿಗೂ ಸಭೆ ನಡೆಸಲಾಗುತ್ತೆ. ನಾನ್ ಕೋವಿಡ್ ಸಂದರ್ಭದಲ್ಲಿ ಅವರ ಕಾರ್ಯವೇನು? ಯಾವ ರೀತಿ ಅವರು ಭಾಗಿಯಾಗಬೇಕು ಎಂಬುದನ್ನ ಚರ್ಚಿಸಲಿದ್ದೇವೆ ಅಂತ ಭರವಸೆ ನೀಡಿದ್ದಾರೆ.

ABOUT THE AUTHOR

...view details