ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದ ಶೂಟಿಂಗ್ ಸದ್ಯ ಮೈಸೂರಿನಲ್ಲಿ ನಡೆಯುತ್ತಿದ್ದು, ಶೂಟಿಂಗ್ ಸೆಟ್ನಲ್ಲಿ 'ಏಕ್ ಲವ್ ಯಾ' ಟೀಂ ದೀಪಾವಳಿ ಹಬ್ಬ ಆಚರಣೆ ಮಾಡಿದೆ.
ಈ ವೇಳೆ ಕನ್ನಡ ನಾಡಿನ ಸಮಸ್ತ ಜನರಿಗೂ ದೀಪಾವಳಿ ಹಬ್ಬದ ಶುಭಾಶಯ ಹೇಳಿರುವ ಏಕ್ ಲವ್ ಯಾ ಟೀಂ, ಪಟಾಕಿಯನ್ನು ಕಮ್ಮಿ ಹೊಡೆದು ಹೆಚ್ಚು ದೀಪಗಳ ಹಚ್ಚಿ. ಅಲ್ಲದೆ ಪುಟ್ಟ ಮಕ್ಕಳು ತಂಬಾ ಹುಷರಾಗಿ ಪಟಾಕಿ ಹಚ್ಚಿ ಎಂದು ಮನವಿ ಮಾಡಿದೆ.
ಇದೀಗ ಏಕ್ ಲವ್ ಯಾ ತಂಡಕ್ಕೆ ಮತ್ತೊಬ್ಬ ಅತಿಥಿ ಸೇರ್ಪಡೆಯಾಗಿದ್ದಾರೆ. ಈ ಟೀಂಗೆ ನಟ ಚರಣ್ ರಾಜ್ ಸೇರಿಕೊಂಡಿದ್ದಾರೆ. ಇವರನ್ನು ನಿರ್ದೇಶಕ ಜೋಗಿ ಪ್ರೇಮ್ ತಮ್ಮ ಅಡ್ಡಕ್ಕೆ ಸ್ವಾಗತಿಸಿದ್ದಾರೆ.
'ಏಕ್ ಲವ್ ಯಾ' ತಂಡದಿಂದ ಶುಭಾಷಯ ಇನ್ನು ಏಕ್ ಲವ್ ಯಾ ಅಡ್ಡಾದಲ್ಲಿ ನಡೆದ ಬೆಳಕಿನ ಹಬ್ಬದ ಆಚರಣೆ ಬಲು ಜೋರಾಗಿದ್ದು, ಸುರ್ ಸುರ್ ಬತ್ತಿ ಹಚ್ಚಿ ನಟಿ ರಚಿತಾ ರಾಮ್, ರಾಣ, ಛಾಯಾಗ್ರಾಹಕ ಮಹೇಶ್ ಸಿಂಹ, ನಿರ್ದೇಶಕ ಪ್ರೇಮ್ ಸೇರಿದಂತೆ ಇಡೀ ಚಿತ್ರತಂಡ ದೀಪಾವಳಿ ಹಬ್ಬ ಆಚರಿಸಿತು.