ಈ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಸ್ಟಾರ್ ನಟರಿಂದ ಹಿಡಿದು, ಹೊಸ ನಟರ ಸಿನಿಮಾಗಳ ಹೊಸ ಪೋಸ್ಟರ್ಗಳು, ಟೀಸರ್ ಹಾಗೂ ಮೋಷನ್ ಪೋಸ್ಟರ್ಗಳು ರಿವೀಲ್ ಆಗಿವೆ. ಇದೀಗ ನಿರ್ದೇಶಕ ಜೋಗಿ ಪ್ರೇಮ್ ಕೂಡಾ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ಫೆಬ್ರವರಿಯಲ್ಲಿ ಜೋಗಿ ಪ್ರೇಮ್ 'ಏಕ್ ಲವ್ ಯಾ' ಟೀಸರ್ ದರ್ಶನ - ಫೆಬ್ರವರಿ 14 ರಂದು ಏಕ್ ಲವ್ ಯಾ ಬಿಡುಗಡೆಗೆ ದಿನಾಂಕ ನಿಗದಿ
'ಏಕ್ ಲವ್ ಯಾ' ಸಿನಿಮಾ ಚಿತ್ರೀಕರಣ ಮಾಡುತ್ತಿರುವ ನಿರ್ದೇಶಕ ಪ್ರೇಮ್ ಫೆಬ್ರವರಿಗೆ ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ನಿರ್ದೇಶಕ ಪ್ರೇಮ್ ತಾವೇ ಮುಂದೆ ನಿಂತು ಬಾಮೈದನ ಕೈಲಿ ಟೀಸರ್ ಡಬ್ಬಿಂಗ್ ಮಾಡಿಸುತ್ತಿದ್ದಾರೆ.

ಪ್ರೇಮ್ ಅವರ ಬಾಮೈದ , ರಕ್ಷಿತಾ ಸಹೋದರ ಅಭಿಷೇಕ್ ರಾವ್, ರಾಣಾ ಎಂದು ಹೆಸರು ಬದಲಿಸಿಕೊಂಡು 'ಏಕ್ ಲವ್ ಯಾ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದಾರೆ. ಕಳೆದ ಒಂದು ತಿಂಗಳಿನಿಂದ ಊಟಿಯಲ್ಲಿ , 'ಏಕ್ ಲವ್ ಯಾ' ಸಿನಿಮಾ ಚಿತ್ರೀಕರಣ ಮಾಡುತ್ತಿರುವ ನಿರ್ದೇಶಕ ಪ್ರೇಮ್ ಫೆಬ್ರವರಿಗೆ ತಮ್ಮ ಚಿತ್ರದ ಟೀಸರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ನಿರ್ದೇಶಕ ಪ್ರೇಮ್ ತಾವೇ ಮುಂದೆ ನಿಂತು ಬಾಮೈದನ ಕೈಲಿ ಟೀಸರ್ ಡಬ್ಬಿಂಗ್ ಮಾಡಿಸುತ್ತಿದ್ದಾರೆ. ವೀಕ್ಷಕರಿಗೆ ಸಂಕ್ರಾಂತಿ ಶುಭಾಶಯ ಕೋರಿರುವ ರಾಣಾ, ನಮಗೆ ಇದೇ ರೀತಿ ಸಪೋರ್ಟ್ ಮಾಡಿ ಎಂದು ಸಿನಿಪ್ರಿಯರಲ್ಲಿ ಮನವಿ ಮಾಡಿದ್ದಾರೆ. ಇನ್ನು ರಾಣಾ ಜೋಡಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದು ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಿದ್ದಾರೆ.
ರಕ್ಷಿತ ಫಿಲ್ಮ್ ಫ್ಯಾಕ್ಟರ್ ಅಡಿ 'ಏಕ್ ಲವ್ ಯಾ' ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಇದೊಂದು ಔಟ್ ಅ್ಯಂಡ್ ಔಟ್ ಲವ್ ಸ್ಟೋರಿ ಆಗಿದ್ದು, 'ದಿ ವಿಲನ್' ನಂತರ ಪ್ರೇಮ್ ನಿರ್ದೇಶನ ಮಾಡಿರುವ ಸಿನಿಮಾ ಇದು. ಫೆಬ್ರವರಿ 14 ಪ್ರೇಮಿಗಳ ದಿನದಂದು 'ಏಕ್ ಲವ್ ಯಾ' ಟೀಸರ್ ನಿಮ್ಮ ಮುಂದೆ ಬರಲಿದೆ.