ನಿರ್ದೇಶಕ ಜೋಗಿ ಪ್ರೇಮ್ ಇದೀಗ ಏಕ್ ಲವ್ ಯಾ ಸಿನಿಮಾದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಲಾಕ್ಡೌನ್ ನಂತರ ಮತ್ತೆ ಸಿನಿಮಾ ಶೂಟಿಂಗ್ಗೆ ಕೈ ಹಾಕಿರುವ ಪ್ರೇಮ್, ಊಟಿಯಲ್ಲಿ ಚಿತ್ರೀಕರಣ ಮಾಡಿದ್ರು. ಇದೀಗ ಕಾಶ್ಮೀರದಲ್ಲಿ ಏಕ್ ಲವ್ ಯಾ ಚಿತ್ರದ ಹಾಡಿನ ಶೂಟಿಂಗ್ ಮಾಡುತ್ತಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಶೂಟಿಂಗ್ ಲೊಕೇಶನ್ ಹುಡುಕಾಟಕ್ಕೆ ಕಾಶ್ಮೀರ, ಲಡಾಖ್, ಗುಜರಾತ್, ರಾಜಸ್ಥಾನ ಸೇರಿದಂತೆ ಹಲವು ಕಡೆ ಪ್ರೇಮ್ ಭೇಟಿ ಕೊಟ್ಟಿದ್ದರು. ಕೊನೆಯದಾಗಿ ಕಾಶ್ಮೀರದಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ.
ಈ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡಿರುವ ನಿರ್ದೇಶಕ ಪ್ರೇಮ್ ಚಿತ್ರತಂಡದ ಜೊತೆಗಿನ ಒಂದು ಫೋಟೋವನ್ನು ಸೋಷಿಯಲ್ ಮೀಡಿದ್ದಲ್ಲಿ ಹಾಕಿ, ನಾನು ಈ ಹಾಡಿನ ಶೂಟಿಂಗ್ ಮಾಡಲು ಬೇರೆ ದೇಶಕ್ಕೆ ಹೋಗಬೇಕು ಅಂದುಕೊಂಡಿದ್ದೆ. ಆದ್ರೆ ನಿಜವಾಗಿಯೂ ನಮ್ಮ ಕಾಶ್ಮೀರ ಬೇರೆ ದೇಶಕ್ಕಿಂತಲೂ ಅದ್ಭುತವಾಗಿದೆ. ಇಲ್ಲಿ ನಮಗೆ ಸಹಕರಿಸಿದ ಸ್ಥಳೀಯರಿಗೆ, ಜಮ್ಮು ಕಾಶ್ಮೀರ ಪೊಲೀಸರಿಗೆ ಹಾಗೂ ಆರ್ಮಿಗೆ ಧನ್ಯವಾದ ಎಂದಿದ್ದಾರೆ..
ಏಕ್ ಲವ್ ಯಾ ಚಿತ್ರದಲ್ಲಿ ಪ್ರೇಮ್ ಅಳಿಯ ಅಂದ್ರೆ ರಕ್ಷಿತಾ ಸಹೋದರ ರಾಣಾ ನಾಯಕನ ಪಾತ್ರ ಮಾಡುತ್ತಿದ್ದಾರೆ. ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.