ಕರ್ನಾಟಕ

karnataka

ETV Bharat / sitara

ಇದೇ 21ರಿಂದ ನಿಮ್ಮ ಮನೆಗೆ ಬರ್ತಿದ್ದಾರೆ ಎಡೆಯೂರು ಶ್ರೀಸಿದ್ಧಲಿಂಗೇಶ್ವರ!

ಡಿ.21 ರಿಂದ ಕಿರುತೆರೆಯಲ್ಲಿ ಪೌರಾಣಿಕ ಧಾರಾವಾಹಿ ಎಡೆಯೂರು ಶ್ರೀಸಿದ್ಧಲಿಂಗೇಶ್ವರ ಪ್ರಸಾರವಾಗಲಿದೆ.

edeyuru siddalingeshwara serial in str suvrna
ಇದೇ 21ರಿಂದ ನಿಮ್ಮ ಮನೆಗೆ ಬರ್ತಿದ್ದಾರೆ ಎಡೆಯೂರು ಶ್ರೀಸಿದ್ಧಲಿಂಗೇಶ್ವರ!

By

Published : Dec 16, 2020, 8:29 PM IST

ಕಿರುತೆರೆಯಲ್ಲಿ ಮತ್ತೊಂದು ಪೌರಾಣಿಕ ಧಾರಾವಾಹಿ ಇದೇ 21 ರಿಂದ ಆರಂಭವಾಗಲಿದೆ. ಎಡೆಯೂರು ಸಿದ್ಧಲಿಂಗೇಶ್ಚರ ಮಹಿಮೆ ಧಾರಾವಾಹಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕಾರ್ತಿಕ ಅಮಾವಾಸ್ಯೆಯ ಲಕ್ಷದೀಪೋತ್ಸವ ಕಾರ್ಯಕ್ರಮದ ನಿಮಿತ್ತ ದೇಗುಲಕ್ಕೆ ವಾಹಿನಿಯಿಂದ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.

ದೀಪೋತ್ಸವ

ಸ್ಟಾರ್ ಸುವರ್ಣ ವಾಹಿನಿಯು ರಾಜ್ಯಾದ್ಯಂತ ವಿಶೇಷವಾದ ಸಿದ್ಧಿರಥದ ಮೂಲಕ ಎಡೆಯೂರು ಸಿದ್ಧಲಿಂಗೇಶ್ಚರ ಮಹಿಮೆ ಸಾರಲು ಮುಂದಾಗಿದೆ. ಈ ಮೂಲಕ ಎಡೆಯೂರು ಶ್ರೀ ಸಿದ್ಧಲಿಂಗೇಶ್ಚರರ ಜೀವನ ಚರಿತ್ರೆ ಪ್ರಸಾರವಾಗಲಿದೆ.

ವಿನಯ್ ಗೌಡ

ಎಡೆಯೂರು ಸಿದ್ಧಲಿಂಗೇಶ್ವರ ಪಾತ್ರವನ್ನು ವಲ್ಲಭ ಅವರು ನಿರ್ವಹಿಸಿದ್ದಾರೆ. ಶಿವನ ಪಾತ್ರದಲ್ಲಿ ವಿನಯ್ ಗೌಡ ನಟಿಸುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎರಡನೇ ಬಾರಿಗೆ ಶಿವನ ಪಾತ್ರ ಲಭಿಸಿದೆ. ನಮ್ಮ ಮನೆಯ ದೇವರು ಕೂಡ ಶಿವ. ಇಂತಹ ಅವಕಾಶ ಸಿಗುವುದು‌ ಅಪರೂಪ. ಪ್ರೇಕ್ಷಕರ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ ಎನ್ನುತ್ತಾರೆ.

ವಿನಯ್ ಗೌಡ

ಕನ್ನಡದ ನೆಲದ ಕನ್ನಡಿಗರ ಭಾವಾನಾತ್ಮಕ ನೆಲೆಯಲ್ಲಿ ಸೆರೆ ಹಿಡಿದಿರುವ ಎಡೆಯೂರು ಶ್ರೀ‌ಸಿದ್ಧಲಿಂಗೇಶ್ವರ ಶೀಘ್ರದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲಲಿದೆ ಎಂಬುದು ನಿರ್ದೇಶಕ ನವೀನ್ ಕೃಷ್ಣ ಅವರ ಅಭಿಪ್ರಾಯ.

ಇದೇ 21ರಿಂದ ನಿಮ್ಮ ಮನೆಗೆ ಬರ್ತಿದ್ದಾರೆ ಎಡೆಯೂರು ಶ್ರೀಸಿದ್ಧಲಿಂಗೇಶ್ವರ!

ABOUT THE AUTHOR

...view details