ಕರ್ನಾಟಕ

karnataka

ETV Bharat / sitara

ಟ್ರೋಲ್ ಆದ ದಿವ್ಯಾ ಸುರೇಶ್ ವಿಡಿಯೋ.. ಇದಕ್ಕೆ ದಿವ್ಯಾ ಕೊಟ್ಟ ಉತ್ತರ ಹೀಗಿತ್ತು! - Bigg Boss Kannada Season 8

ಇದೆಲ್ಲಾ ಕಾಕತಾಳೀಯ. ಆದರೂ ಮನಸ್ಸಿಗೆ ಬೇಸರವಾಯಿತು. ವಿಕೃತ ಮನಸ್ಸುಗಳು ಸುದೀಪ್ ಸರ್ ಅವರನ್ನೇ ಐರನ್ ಲೆಗ್ ಎಂದು ಹೀಯಾಳಿಸಿದ್ದರು. ಈಗ ಅವರು ಸೂಪರ್ ಸ್ಟಾರ್ ಆಗಿದ್ದಾರೆ. ನಮ್ಮನ್ನು ಆಡಿಕೊಳ್ಳುವ ಮುನ್ನ ನಮ್ಮ ಸ್ಥಾನದಲ್ಲಿದ್ದುಕೊಂಡು ಯೋಚಿಸಬೇಕು..

duvya suresh
ದಿವ್ಯಾ ಸುರೇಶ್

By

Published : May 25, 2021, 1:40 PM IST

ಬಿಗ್ ಬಾಸ್ ಕನ್ನಡ ಸೀಸನ್ 8ರ ಪ್ರಬಲ ಸ್ಪರ್ಧಿಗಳ ಪೈಕಿ ಒಬ್ಬರಾಗಿದ್ದ ದಿವ್ಯಾ ಸುರೇಶ್ ತಮ್ಮ ಬಗೆಗಿನ ಟ್ರೋಲ್ ಬಗ್ಗೆ ಮಾತನಾಡಿದ್ದಾರೆ.

ದಿವ್ಯಾ ಸುರೇಶ್

ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ದಿವ್ಯಾ, ಮಂಜು ಪಾವಗಡ ಅವರ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಆಗ ಟ್ರೋಲಿಗರು ದಿವ್ಯಾ, ಮಂಜು ಅವರನ್ನು ಬಳಸಿಕೊಂಡು ಮುಂದೆ ಬರಲು ನೋಡುತ್ತಿದ್ದಾರೆ ಎಂದು ಆಡಿಕೊಂಡಿದ್ದರು.

ಆದರೆ, ದಿವ್ಯಾ ಅಭಿಮಾನಿಗಳು ಮಾತ್ರ ದಿವ್ಯಾ ಬಿಗ್ ಬಾಸ್ ಮನೆಯಲ್ಲಿ ಇತರ ಸ್ಪರ್ಧಿಗಳೊಂದಿಗೆ ನಡೆದುಕೊಳ್ಳುವ ರೀತಿ, ನೇರ ಮಾತುಗಳನ್ನು ಇಷ್ಟಪಟ್ಟಿದ್ದರು.

ಆದರೆ, ಕೊರೊನಾ ಪರಿಣಾಮ ಲಾಕ್‌ಡೌನ್ ಕಾರಣದಿಂದ ರಿಯಾಲಿಟಿ ಶೋ ಅರ್ಧಕ್ಕೆ ಸ್ಥಗಿತಗೊಂಡ ಮೇಲೆ ಮತ್ತೆ ದಿವ್ಯಾ ಸುರೇಶ್ ಟ್ರೋಲಿಗರಿಗೆ ಆಹಾರವಾದರು.

ಕಾರಣವಿದು...
ಬಿಗ್ ಬಾಸ್ ಶೋ ಆರಂಭದಲ್ಲಿ ಸುದೀಪ್ ಬಳಿ ದಿವ್ಯಾ “ನಾನು ಯಾವುದೇ ಕೆಲಸ ಮಾಡಲು ಹೋದರೂ ಅದು ಅರ್ಧಕ್ಕೆ ನಿಲ್ಲುತ್ತದೆ. ನಾನು ಮಾಡಿದ ಧಾರಾವಾಹಿ ಅರ್ಧಕ್ಕೆ ನಿಂತಿತು, ಸಿನಿಮಾ ರಿಲೀಸ್ ಆಗಲೇ ಇಲ್ಲ” ಎಂದು ನೊಂದುಕೊಂಡು ಹೇಳಿದ್ದರು.

ಈಗ ದಿವ್ಯಾ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಟ್ರೋಲಿಗರು ಆ ವಿಡಿಯೋವನ್ನು ಎಡಿಟ್ ಮಾಡಿ ಮತ್ತೆ ಟ್ರೋಲ್ ಮಾಡಿದ್ದಾರೆ. ಈ ಕುರಿತು ದಿವ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.

ದಿವ್ಯಾ ಸುರೇಶ್

“ಇದೆಲ್ಲಾ ಕಾಕತಾಳೀಯ. ಆದರೂ ಮನಸ್ಸಿಗೆ ಬೇಸರವಾಯಿತು. ವಿಕೃತ ಮನಸ್ಸುಗಳು ಸುದೀಪ್ ಸರ್ ಅವರನ್ನೇ ಐರನ್ ಲೆಗ್ ಎಂದು ಹೀಯಾಳಿಸಿದ್ದರು. ಈಗ ಅವರು ಸೂಪರ್ ಸ್ಟಾರ್ ಆಗಿದ್ದಾರೆ.

ನಮ್ಮನ್ನು ಆಡಿಕೊಳ್ಳುವ ಮುನ್ನ ನಮ್ಮ ಸ್ಥಾನದಲ್ಲಿದ್ದುಕೊಂಡು ಯೋಚಿಸಬೇಕು” ಎಂದು ತಮ್ಮ ಮನಸ್ಸಿನ ಮಾತನ್ನು ಹೊರ ಹಾಕಿದ್ದಾರೆ. ಟ್ರೋಲ್ ವಿಡಿಯೋ ವೈರಲ್ ಆಗಿತ್ತು. ಸದ್ಯ, ದಿವ್ಯಾ ಅವರ ಮಾತನ್ನು ಕೇಳಿ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಓದಿ:ವಿಭಿನ್ನ ಶೈಲಿಯ ಉಡುಪಿನಿಂದ ಕಂಗೊಳಿಸಿದ ಹಾಲಿವುಡ್ ಹಾಟ್ ಜೋಡಿ ಪಿಗ್ಗಿ-ನಿಕ್​..

ABOUT THE AUTHOR

...view details